ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಟಿಸಿ (BMTC) ಸಿಹಿಸುದ್ದಿ ನೀಡುತ್ತಿದೆ. ಮನೆ ಬಳಿಯಿಂದಲೇ ಮೆಟ್ರೋ ನಿಲ್ದಾಣಕ್ಕೆ ತೆರಳಲು ಬಸ್ ಸೇವೆ ಕಲ್ಪಿಸಲು ಮುಂದಾಗಿದೆ. ಬಿಎಂಟಿಸಿ ಮತ್ತು ಬೆಂಗಳೂರು ಮೆಟ್ರೋ ನಿಗಮ (BMRCL) ಒಪ್ಪಂದ ಮೇರೆಗೆ ಬಿಎಂಟಿಸಿ ಮಿನಿಬಸ್ ಆರಂಭಿಸ್ತಾ ಇದ್ದು ಶೀಘ್ರದಲ್ಲೆ ಟೆಂಡರ್ ಕರೆಯಲಿದೆ.
Advertisement
ಬೆಂಗಳೂರಿನಂತಹ ಮಹಾನಗರದಲ್ಲಿ ಬಿಎಂಟಿಸಿ ಸೇವೆ ಹೇರಳವಾಗಿದೆ. ಮುಖ್ಯರಸ್ತೆಗಳಿಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸ್ತಿವೆ, ಬೆಂಗಳೂರಿನ ಗಲ್ಲಿಗಳಿಂದ, ಅಪಾರ್ಟ್ ಮೆಂಟ್‍ಗಳಿಂದ ನೇರವಾಗಿ ಬಸ್ ಸೇವೆ ಇಲ್ಲ. ಹೀಗಾಗಿ ಮೆಟ್ರೋ ಪ್ರಯಾಣ ಮತ್ತಷ್ಟು ಸುಲಭ ಮಾಡಲು ಬಿಎಂಆರ್ ಸಿಎಲ್ ಮುಂದಾಗಿದೆ. ನೇರವಾಗಿ ಮನೆಗಳಿಂದ ಮತ್ತು ಅಪಾರ್ಟ್ ಮೆಂಟ್ ಗಳಿಂದ ಸಂಪರ್ಕ ಕಲ್ಪಿಸುವ ಮಿನಿ ಬಸ್‍ಸೇವೆ ಒದಗಿಸಲು ಮುಂದಾಗಿದೆ. ಇದಕ್ಕಾಗಿ ಮಿನಿ ಬಸ್‍ಗಳನ್ನ ನೀಡುವಂತೆ ಬಿಎಂಟಿಸಿ ಮುಂದೆ ಬಿಎಂಆರ್ ಸಿಎಲ್ ಪ್ರಸ್ತಾಪ ಇಟ್ಟಿದ್ದು ಇದನ್ನ ಕಾರ್ಯ ರೂಪಕ್ಕೆ ತರಲು ಬಿಎಂಟಿಸಿ ಮುಂದಾಗಿದೆ.
Advertisement
Advertisement
ಈಗಾಗಲೇ ನಗರದಲ್ಲಿ 200 ಮೆಟ್ರೊ ಪೀಢರ್ ಬಸ್‍ಗಳಿವೆ ಅವುಗಳು ಬಡಾವಣೆಗಳ ಒಳಗಡೆ ಅಥವಾ ವಸತಿ ಸಮುಚ್ಚಯಗಳಿಗೆ ಹೋಗಲ್ಲ. 7 ಮೀಟರ್ ಉದ್ದದ 100 ಮಿನಿ ಬಸ್‍ಗಳನ್ನ ಖರೀದಿ ಮಾಡಿ ಶೀಘ್ರದಲ್ಲೆ ಟೆಂಡರ್ ಕರೆದು ರಸ್ತೆಗೆ ಇಳಿಸಲಿದ್ದೇವೆ ಅಂತಾ ಬಿಎಂಟಿಸಿಯ ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಸೂರ್ಯಸೇನ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಚಳಿಗೆ ನಡುಗಿದ ಬೆಂಗಳೂರು – ಕಳೆದ 10 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು
Advertisement
ಒಟ್ಟಾರೆ ಮನೆ ಬಾಗಿಲಿನಿಂದ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಿನಿ ಬಸ್ ಸೇವೆ ನೀಡಲು ಬಿಎಂಟಿಸಿ ನಿರ್ಧರಿಸಿದ್ದು, ಇದು ಆದಷ್ಟು ಬೇಗ ಜಾರಿ ಆಗಲಿ ಅನ್ನೋದು ಎಲ್ಲರ ಆಶಯವಾಗಿದೆ.