ಬೆಳಗಾವಿ: ಜಿಲ್ಲೆಯ ರೈತರಿಗೆ ಬೆಮುಲ್ ಗುಡ್ ನ್ಯೂಸ್ ನೀಡಿದೆ. ಹಾಲಿನ ಪ್ರೋತ್ಸಾಹ ಧನ ಪರಿಷ್ಕ್ರತ ದರವನ್ನು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ.
ಎಮ್ಮೆ ಹಾಲಿಗೆ 3.40 ರೂ., ಹಸು ಹಾಲಿಗೆ ರೂ. ಪ್ರೋತ್ಸಾಹ ಹೆಚ್ಚಳ ಮಾಡಲಾಗಿದೆ. ಗೋಕಾಕ್ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಕುರಿತು ತೀರ್ಮಾನ ಪ್ರಕಟಿಸಿದ್ದಾರೆ.
ದರ ಪರಿಷ್ಕರಣೆಯಿಂದ ಪ್ರಸಕ್ತ ಎಮ್ಮೆ ಹಾಲಿನ ದರ ಪ್ರತಿ ಲೀಟರ್‌ಗೆ 41.60 ರೂ. ಇದ್ದು ಈಗ 3.49 ರೂ., 5 ರೂ. ಪ್ರೋತ್ಸಾಹ ದನ ಸೇರಿ ಒಟ್ಟು 50 ರೂ. ರೈತರಿಗೆ ಸಿಗಲಿದೆ. ಅದರಂತೆ ಹಸು ಹಾಲಿನ ದರ ಪ್ರತಿ ಲೀಟರ್‌ಗೆ 29.10 ರೂ. ಇದ್ದು ಈಗ 1 ರೂ. ಮತ್ತು 5 ರೂ. ಪ್ರೋತ್ಸಾಹ ದನ ಸೇರಿ 35 ರೂ. ಸಿಗಲಿದೆ ಎಂದು ಹೇಳಿದ್ದಾರೆ.
ರೈತರಿಗೆ 10 ದಿನಗಳಲ್ಲಿ ಬಿಲ್ ಪಾವತಿ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ಗ್ರಾಹಕರಿಗೂ ಅನುಕೂಲವಾಗಲಿದೆ. ಕಳೆದ ವರ್ಷ 68 ಲಕ್ಷ ರೂ. ನಿವ್ವಳ ಲಾಭ ಜಿಲ್ಲಾ ಹಾಲು ಒಕ್ಕೂಟಕ್ಕೆ ಆಗಿತ್ತು. ಪ್ರಸಕ್ತ ಮಾರ್ಚ್ ಅಂತ್ಯದವರೆಗೆ ಲಾಭ ತರಲು ಕೆಲಸ ಮಾಡಲಾಗುತ್ತಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.