ಬೆಂಗಳೂರು: ಮದ್ಯಪ್ರಿಯರಿಗೆ ಗುಡ್‌ನ್ಯೂಸ್ ನೀಡಲು ನಮ್ಮ ಮೆಟ್ರೋ (Namma Metro) ಚಿಂತನೆ ನಡೆಸಿದೆ.
ಮುಂಬರುವ ವರ್ಷಗಳಲ್ಲಿ ದೆಹಲಿ ಮೆಟ್ರೋದಂತೆ ನಮ್ಮ ಮೆಟ್ರೋದಲ್ಲಿಯೂ ಪ್ರಯಾಣಿಕರಿಗೆ ಸೀಲ್ ಮಾಡಿರುವ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡುವ ಬಗ್ಗೆ ಬಿಎಂಆರ್‌ಸಿಎಲ್ ಸಭೆಯಲ್ಲಿ ಚರ್ಚೆಯಾಗಿದೆ. ಇದನ್ನೂ ಓದಿ: ನಾಳೆ ಸಾರಿಗೆ ಮುಷ್ಕರ ಇಲ್ಲ| ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್ – ಇಂದು ಏನಾಯ್ತು?
ಏರ್‌ಪೋರ್ಟ್‌ಗೆ ಸಂಪರ್ಕಿಸುವ ಮೆಟ್ರೋ ಮಾರ್ಗಗಳಲ್ಲಿ, ಮುಂದಿನ ಎರಡು ವರ್ಷಗಳಲ್ಲಿ ಈ ನಿಯಮ ಜಾರಿಗೆ ತರಲು ಬಿಎಂಆರ್‌ಸಿಎಲ್ ಚರ್ಚೆ ನಡೆಸಿದೆ. ಸದ್ಯ ಬಿಎಂಆರ್‌ಸಿಎಲ್‌ನ 58 ನಿಷೇಧಿತ ಪಟ್ಟಿಯಲ್ಲಿ ಆಲ್ಕೋಹಾಲ್ ಇದ್ದು, ಏರ್‌ಪೋರ್ಟ್‌ಗೆ ಮೆಟ್ರೋ ಕನೆಕ್ಟಿವಿಟಿ ನಂತರ ಆಲ್ಕೋಹಾಲ್ ಕೊಂಡೊಯ್ಯಲು ಅವಕಾಶ ನೀಡೋ ಸಾಧ್ಯತೆಯಿದೆ ಎನ್ನಲಾಗಿದೆ.

