ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಬಿಬಿಎಂಪಿ (BBMP) ಏರ್‌ಪೋರ್ಟ್ ರಸ್ತೆ (Airport Road) ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ.
ಸಿಲಿಕಾನ್ ಸಿಟಿಯಲ್ಲಿ (Silicon City) ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ರಸ್ತೆಗಳ ಪೈಕಿ ಏರ್‌ಪೋರ್ಟ್ ರಸ್ತೆ ಕೂಡ ಒಂದು. ಹೀಗಾಗಿ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ.ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್ ಭೇಟಿ
ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಹೆಣ್ಣೂರು, ಬಾಗಲೂರು ಮಾರ್ಗದಲ್ಲಿ ಹೆಚ್ಚು ಟ್ರಾಫಿಕ್ ಇರುತ್ತದೆ. ಹೀಗಾಗಿ ಟ್ರಾಪಿಕ್ ನಿಯಂತ್ರಣಕ್ಕೆ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. ಹೆಣ್ಣೂರು ಜಂಕ್ಷನ್‌ನಿಂದ ಬಾಗಲೂರುವರೆಗೂ ಎಲಿವೇಟೆಡ್ ಕಾರಿಡಾರ್ ಮಾಡಲಿದ್ದಾರೆ. ಎಲಿವೆಟೆಡ್ ಕಾರಿಡಾರ್ ಆದರೆ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಟ್ರಾಫಿಕ್ ಕಡಿಮೆ ಆಗುತ್ತದೆ.
ಇನ್ನೂ ಏರ್‌ಪೋರ್ಟ್ಗೆ ಕನೆಕ್ಟ್ ಆಗುವ ಮಾರ್ಗಕ್ಕೆ ತುಂಬಾ ಅನುಕೂಲಕರ ಆಗಿರಲಿದೆ. ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆ ಇಟ್ಟಿದ್ದು, ಈ ವರ್ಷದಲ್ಲೇ ಮುಗಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಪ್ರಿಯಕರನಿಗೆ ಪ್ರೇಯಸಿಯಿಂದ ಚಾಕು ಇರಿತ ಕೇಸ್‌ಗೆ ಟ್ವಿಸ್ಟ್ – ನಮ್ಮಿಬ್ಬರಿಗೂ ಮದುವೆಯಾಗಿದೆ ಅಂತ ಪೊಲೀಸರಿಗೆ ತಿಳಿಸಿದ ಯುವತಿ