ಇಸ್ಲಾಮಾಬಾದ್: ನಾವು ಭಾರತದ ಜೊತೆಗಿದ್ದೇವೆ. ಪಾಕಿಸ್ತಾನ ಯಾವಾಗಲೂ ಉತ್ತಮ ನೆರೆಹೊರೆ ಸಂಬಂಧಗಳನ್ನು ಬಯಸುತ್ತದೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಶಾಕ್ ದಾರ್, ಭಾರತದೊಂದಿಗಿನ ಸಂಬಂಧದ ಬಗ್ಗೆ ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದರು. ಪಾಕಿಸ್ತಾನವು ಯಾವಾಗಲೂ ಭಾರತದೊಂದಿಗೆ (India) ಉತ್ತಮ ಸಂಬಂಧವನ್ನು ಹೊಂದಲು ಉತ್ಸುಕವಾಗಿದೆ ಎಂದು ಹೇಳಿದರು.
Advertisement
Advertisement
ಭಾರತದೊಂದಿಗಿನ ನಮ್ಮ ಸಂಬಂಧವು ಐತಿಹಾಸಿಕವಾಗಿ ಕಳಪೆಯಾಗಿದೆ. ಆದರೆ ಪಾಕಿಸ್ತಾನವು ಶಾಶ್ವತ ಹಗೆತನವನ್ನು ಬಯಸುವುದಿಲ್ಲ. ಪರಸ್ಪರ ಗೌರವ, ಸಾರ್ವಭೌಮ ಸಮಾನತೆ ಮತ್ತು ದೀರ್ಘಕಾಲದ ಜಮ್ಮು ಮತ್ತು ಕಾಶ್ಮೀರ ವಿವಾದದ ನ್ಯಾಯಯುತ ಮತ್ತು ಶಾಂತಿಯುತ ಪರಿಹಾರದ ಆಧಾರದ ಮೇಲೆ ನಾವು ಭಾರತದೊಂದಿಗೆ ಉತ್ತಮ ನೆರೆಯ ಸಂಬಂಧಗಳನ್ನು ಬಯಸುತ್ತೇವೆ ಎಂದಿದ್ದಾರೆ.
Advertisement
Advertisement
ಇದೇ ವೇಳೆ ಎರಡು ಪರಮಾಣು ಸಶಸ್ತ್ರ ನೆರೆಹೊರೆಯವರ ನಡುವಿನ ದ್ವಿಪಕ್ಷೀಯ ಸಂಬಂಧಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮೋದಿ ಸರ್ಕಾರಕ್ಕೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮದುವೆಯಾಗಿ ಹಣ, ಚಿನ್ನದೊಂದಿಗೆ ಎಸ್ಕೇಪ್ ಆಗ್ತಿದ್ದ ಮಹಿಳೆಗೆ ಹೆಚ್ಐವಿ – ಆಕೆ ದೈಹಿಕ ಸಂಪರ್ಕಕ್ಕೆ ಬಂದ ಪುರುಷರಿಗಾಗಿ ಹುಡುಕಾಟ
ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಸಂಪೂರ್ಣ ಬಹುಮತ ಪಡೆಯುವ ಮೂಲಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿದ್ದಾರೆ. ಈ ಹಿನ್ನೆಲೆ ಮೋದಿಯವರಿಗೆ ವಿಶ್ವಾದ್ಯಂತ ನಾಯಕರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿತ್ತು. ಅಲ್ಲದೆ ಹಲವು ದೇಶಗಳು ಕೂಡ ಭಾರತದೊಂದಿಗೆ ಉತ್ತಮ ಬಾಂಧವ್ಯಕ್ಕೆ ಒತ್ತು ನೀಡುತ್ತಿವೆ. ಈ ನಡುವೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ನೆರೆಯ ರಾಷ್ಟ್ರ ಪಾಕಿಸ್ತಾನ ಈ ಮಹತ್ವದ ಹೇಳಿಕೆಯೊಂದನ್ನು ನೀಡಿದೆ.