ರಾಯಚೂರು: ರಾಮನ ಹೋಲಿಕೆಯನ್ನು ಇನ್ನೊಬ್ಬರಿಗೆ ಹೋಲಿಸುವಂತದ್ದಲ್ಲಾ, ರಾಮನ ಹೆಸರನ್ನ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ರಾಮನ ಆದರ್ಶ ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನು (Siddaramaiah) ಸಹ ಪಡೆಯಲಿ. ಅವರಿಗೂ ನಾವು ಅಭಿನಂದಿಸೋಣ ಅಂತ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮಿ ಹೇಳಿದ್ದಾರೆ.
Advertisement
ರಾಯಚೂರಿನಲ್ಲಿ ಮಾತನಾಡಿದ ಮಂತ್ರಾಲಯ (Mantralaya) ಶ್ರೀಗಳು, ಸಿಎಂ ಸಿದ್ದರಾಮಯ್ಯರನ್ನ ರಾಮನಿಗೆ ಹೋಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ ನಾನು ಗಮನಿಸಿಲ್ಲ. ರಾಮ ಎಲ್ಲ ರೀತಿಯಿಂದಲೂ ಅನುಕರಣೀಯ ಹಾಗೂ ಆದರ್ಶ ವ್ಯಕ್ತಿ. ನೀನು ಹೇಗಿರಬೇಕು ಅಂತ ಹೇಳುವಾಗ ರಾಮನಂತೆ ನೀನು ಇರು ಅಂತ ದೃಷ್ಟಾಂತ ಎಲ್ಲರೂ ಕೊಡುತ್ತಾರೆ. ಯಾರೊಂದಿಗೂ ಹೋಲಿಕೆ ಸರಿಯಲ್ಲ ಸಿದ್ದರಾಮಯ್ಯನವರಿಗೂ ಒಳ್ಳೆಯದಾಗಲಿ ಎಂದರು.
Advertisement
Advertisement
ಭಾರತೀಯರ, ದೇಶದ ಹಿಂದೂಗಳ ಬಹುದಿನಗಳ ಕನಸು ಈಗ ನನಸಾಗುತ್ತಿದೆ. ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣದ ಬೇಡಿಕೆ ಈಡೇರಿದೆ. ರಾಮ ಮಂದಿರ ಲೋಕಾರ್ಪಣೆ ದಿನ ಬಹುತೇಕ ನಾವು ಪಾಲ್ಗೊಳ್ಳುತ್ತೇವೆ. ವಿದ್ಯುತ್ ಪ್ಯಾನಲ್ ಚಾರ್ಜ್‍ನ್ನ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಬಂದಿದ್ದೇವೆ ಅಂತ ಮಂತ್ರಾಲಯ ಶ್ರೀ ಹೇಳಿದರು. ಇದನ್ನೂ ಓದಿ: ಮಗನ ಸಾಧನೆ ನೋಡೋಕೆ ಅವನ ತಂದೆ ನಮ್ಮೊಂದಿಗಿಲ್ಲ: ಮೈಸೂರಿನ ಶಿಲ್ಪಿ ಯೋಗಿರಾಜ್ ತಾಯಿ ಮಾತು
Advertisement
ರಾಮ ವಿಗ್ರಹದ ಶಿಲೆ ಹಾಗೂ ಶಿಲ್ಪಿ ಕನ್ನಡಿಗರು ಅನ್ನೋದು ನಮ್ಮ ಹೆಮ್ಮೆ. ಹೀಗಾಗಿ ನಾವೆಲ್ಲ ಕನ್ನಡಿಗರು ಅಭಿನಂದಿಸಬೇಕು. ರಾಮ ಉತ್ತರದಿಂದ ದಕ್ಷಿಣಕ್ಕೆ ಬಂದು ಮತ್ತೆ ಉತ್ತರಕ್ಕೆ ಹೋದ. ದಕ್ಷಿಣದಿಂದ ಉತ್ತರಕ್ಕೆ ಬಾಲರಾಮನ ವಿಗ್ರಹ ಹೋಗುತ್ತಿರುವುದು ದಕ್ಷಿಣ ಉತ್ತರಗಳ ಅನುಸಂಧಾನ ಸನ್ನಿವೇಶ ಅಂತ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದ್ದಾರೆ.