ರಾಗಿ ಸೇವನೆ ದೇಹಕ್ಕೆ ಎಷ್ಟು ಒಳ್ಳೆಯದು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ರಾಗಿ ಸೇವನೆ ಮೂಳೆಗಳ ಬಲ ಹೆಚ್ಚಿಸುತ್ತದೆ. ಗ್ಲೂಕೋಸ್ ಮಟ್ಟ ಕಡಿಮೆ ಮಾಡುವ ರಾಗಿ ಮಧುಮೇಹವನ್ನು ನಿಯಂತ್ರಿಸುತ್ತದೆ. ಮಕ್ಕಳು ಹೆಚ್ಚಾಗಿ ರಾಗಿಯ ತಿಂಡಿಗಳನ್ನು ಬೇಡ ಎಂದೇ ಹೇಳುತ್ತಾರೆ. ಆದರೆ ಅವರು ರುಚಿಕರವಾದ ದಾಲ್ ಪೂರಿ, ಟೊಮೆಟೊ ಪೂರಿ, ಅಥವಾ ಮಸಾಲ ಪೂರಿಯನ್ನು ಬೇಡ ಎನ್ನಲು ಸಾದ್ಯವೇ ಇಲ್ಲ. ಹೀಗಾಗಿ ನಾವಿಂದು ರಾಗಿ ಬಳಸಿ ಆಲೂ ಪೂರಿ ಮಾಡೋದು ಹೇಗೆಂದು ತಿಳಿಸಿಕೊಡುತ್ತೇವೆ. ಇದನ್ನು ಮೊಸರು, ಆಲೂಗಡ್ಡೆ ಮತ್ತು ಟೊಮೆಟೊ ಕರಿಯಂತಹ ಯಾವುದೇ ಮಸಾಲೆಯುಕ್ತ ಗ್ರೇವಿಯೊಂದಿಗೆ ಸವಿಯಬಹುದು. ನೀವು ಕೂಡಾ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ರಾಗಿ ಹಿಟ್ಟು – ಅರ್ಧ ಕಪ್
ಗೋಧಿ ಹಿಟ್ಟು – 2 ಟೀಸ್ಪೂನ್
ಬೇಯಿಸಿ ಹಿಸುಕಿದ ಆಲೂಗಡ್ಡೆ – ಅರ್ಧ ಕಪ್
ಎಳ್ಳು – ಕಾಲು ಟೀಸ್ಪೂನ್
ಕೆಂಪು ಮೆಣಸಿನಪುಡಿ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹಿಂಗ್ – ಚಿಟಿಕೆ
ಎಣ್ಣೆ – ಡೀಪ್ ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಟ್ರೈ ಮಾಡಿ ಮುಂಬೈ ಮಸಾಲ ಸ್ಯಾಂಡ್‌ವಿಚ್….
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು, ಗೋಧಿ ಹಿಟ್ಟು, ಎಳ್ಳು, ಕೆಂಪು ಮೆಣಸಿನಪುಡಿ, ಉಪ್ಪು ಹಾಗೂ ಹಿಂಗ್ ಹಾಕಿ ಮಿಶ್ರಣ ಮಾಡಿ.
* ಬೇಯಿಸಿ ಹಿಸುಕಿದ ಆಲೂಗಡ್ಡೆ ಸೇರಿಸಿ.
* ಅದಕ್ಕೆ ಉಗುರು ಬೆಚ್ಚಗಿನ ನೀರನ್ನು ಸೇರಿಸಿಕೊಂಡು ಪೂರಿ ಹದಕ್ಕೆ ಮೃದುವಾದ ಹಿಟ್ಟನ್ನು ತಯಾರಿಸಿ.
* ಹಿಟ್ಟನ್ನು 6 ಭಾಗಗಳನ್ನಾಗಿ ಮಾಡಿಕೊಂಡು ಉಂಡೆಗಳನ್ನು ಕಟ್ಟಿಕೊಳ್ಳಿ.
* ಒಣ ಗೋಧಿ ಹಿಟ್ಟನ್ನು ಬಳಸಿ ಈಗ ಲಟ್ಟಣಿಗೆ ಸಹಾಯದಿಂದ ಪೂರಿಗಳನ್ನು ಲಟ್ಟಿಸಿಕೊಳ್ಳಿ.
* ಈಗ ಡೀಪ್ ಫ್ರೈಗೆ ಎಣ್ಣೆ ಬಿಸಿ ಮಾಡಿ, ಪೂರಿಗಳನ್ನು ಒಂದೊಂದೇ ಬಿಟ್ಟು ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ.
* ಪೂರಿಯನ್ನು ತಿರುವಿ ಹಾಕಿ ಎರಡೂ ಬದಿಯಲ್ಲಿ ಕಾಯಿಸಿಕೊಳ್ಳಿ.
* ಬಳಿಕ ಪೂರಿಯನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್‌ನಲ್ಲಿ ಹಾಕಿ. ಉಳಿದ ಪೂರಿಗಳನ್ನೂ ಇದೇ ರೀತಿ ಮಾಡಿ.
* ಇದೀಗ ರಾಗಿ ಆಲೂ ಪೂರಿ ತಯಾರಾಗಿದ್ದು, ಇದನ್ನು ನಿಮ್ಮಿಷ್ಟದ ಉಪ್ಪಿನಕಾಯಿ ಅಥವಾ ಪಲ್ಯದೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಉಳಿದ ಬ್ರೆಡ್‌ನಿಂದ ಮಾಡಿ ರುಚಿಕರ ವಡೆ