ಸೂಪರ್ ಹಿಟ್ ಚಿತ್ರಗಳನ್ನೇ ನೀಡಿರುವ ಲೋಕೇಶ್ ಕನಗರಾಜ್ (Lokesh Kanagaraj) ಇದ್ದಕ್ಕಿದ್ದಂತೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ. ‘ನಾನು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಮತ್ತು ಒಂದಷ್ಟು ಕೆಲಸ ಮಾಡುವ ಆಸೆಯಿತ್ತು. ಹತ್ತು ಸಿನಿಮಾಗಳನ್ನು ನಿರ್ದೇಶಿಸಿ ಸಿನಿಮಾ ರಂಗವನ್ನು ತೊರೆಯುವುದಾಗಿ (Goodbye) ಅವರು ಮಾತನಾಡಿದ್ದಾರೆ.
ತಮಿಳು (Tamil) ಸಿನಿಮಾ ರಂಗದಲ್ಲಿ ಅತೀ ಕಡಿಮೆ ಅವಧಿಯಲ್ಲೇ ಸಾಕಷ್ಟು ಹೆಸರು ಮಾಡಿದವರು ಲೋಕೇಶ್ ಕನಗರಾಜ್. ಐವರೆಗೂ ಇವರು ಮಾಡಿದ್ದು ಐದು ಸಿನಿಮಾ. ಇನ್ನೂ ಐದು ಸಿನಿಮಾಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಅವರು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಇದನ್ನೂಓದಿ:ಹೆಣ್ಣು ಮಗುವಿನ ತಂದೆಯಾದ ನಟ ರಾಮ್ ಚರಣ್
ಲೋಕೇಶ್ ಅವರ ಮುಂದಿನ ಸಿನಿಮಾ ಕೂಡ ಅನೌನ್ಸ್ ಆಗಿದೆ. ದಳಪತಿ ವಿಜಯ್ ಜೊತೆ ಲಿಯೋ ಸಿನಿಮಾವನ್ನು ಮಾಡಲಿದ್ದಾರೆ. ಇದು ಅವರ 6ನೇ ಸಿನಿಮಾ. ಭಾರೀ ಬಜೆಟ್ ಸಿನಿಮಾ ಇದಾಗಿದ್ದು, ಈಗಾಗಲೇ ಈ ಚಿತ್ರಕ್ಕೆ ಬೇಕಾದ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಗಿದರೆ ಕೈಯಲ್ಲಿ ಉಳಿಯೋದು ನಾಲ್ಕು ಸಿನಿಮಾ ಮಾತ್ರ.
ತಮ್ಮದೇ ಆದ ಶೈಲಿಯ ಚಿತ್ರಗಳಿಂದ ಗುರುತಿಸಿಕೊಂಡಿರುವ ಲೋಕೇಶ್, ಇಷ್ಟು ಬೇಗ ಚಿತ್ರರಂಗವನ್ನು ತೊರೆಯುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಸಾಕಷ್ಟು ಚಿತ್ರಗಳನ್ನು ಕೊಡುತ್ತಾರೆ ಎಂದೇ ಹಲವರು ಕನಸು ಕಂಡಿದ್ದರು. ಲೋಕೇಶ್ ಜೊತೆ ಕೆಲಸ ಮಾಡುವ ಕನಸನ್ನೂ ಹಲವರು ಹೇಳಿಕೊಂಡಿದ್ದರು. ಅವರೆಲ್ಲರಿಗೂ ಲೋಕೇಶ್ ನಿರಾಸೆ ಮಾಡಿದ್ದಾರೆ.