ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಇನ್ಮೇಲೆ ಕಾರ್ಪೊರೇಟ್ ಸ್ಟೈಲಲ್ಲಿ ಸರ್ಕಾರಿ ಕೆಲಸ ನಡೆಯುವ ಮೂಲಕ ಸಿ-ಕಹಿ ಪ್ಯಾಕೇಜ್ ದೊರೆಯಲಿದೆ.
ಹೌದು. ಸರ್ಕಾರಿ ನೌಕರರಿಗೆ ಐದು ದಿನ ಕೆಲಸ ಎರಡು ದಿನ ರಜೆ ನೀಡಲು ಸರ್ಕಾರದ ನಿರ್ಧರಿಸಿದೆ. ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡಲು 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿಗೆ ಸರ್ಕಾರ ಚಿಂತನೆ ನಡೆಸಿದೆ.
Advertisement
Advertisement
ಸರ್ಕಾರಿ ಕೆಲಸದ ಅವಧಿ ಹೆಚ್ಚಳ ಮಾಡಿ ವೀಕೆಂಡ್‍ಗೆ ರಜೆ ನೀಡುವ ಚಿಂತನೆ ನಡೆಸಲಾಗಿದೆ. ಪ್ರಸ್ತುತ 10:30 ರಿಂದ 5:30 ತನಕ ಇರುವ ಕೆಲಸದ ಅವಧಿ, ಇನ್ಮುಂದೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ತನಕ ಏರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ 5 ದಿನ ಕೆಲಸದ ಪದ್ದತಿ ತನ್ನಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ
Advertisement
15 ಸಾಂದರ್ಭಿಕ ರಜೆಯನ್ನ ಎಂಟಕ್ಕೆ ಇಳಿಕೆ ಮಾಡುವ ಸಾಧ್ಯತೆಗಳಿದೆ. ಹಾಗೆಯೇ ನಾನಾ ಜಯಂತಿಗಳಿಗೆ ರಜೆ ನೀಡುವುದನ್ನ ಕಡಿತಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ. ವೇತನ ಹೆಚ್ಚಳಕ್ಕೆ ಕಾರ್ಯಕ್ಷಮತೆ ಅಳತೆಗೋಲು, ಕೆಲ ಇಲಾಖೆಗಳ ವಿಲೀನ ಸೇರಿದಂತೆ ನೌಕರರ ಕೆಂಗಣ್ಣಿಗೆ ಗುರಿಯಾಗುವಂಥ ಶಿಫಾರಸ್ಸುಗಳಿವೆ.
Advertisement
ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸು ಕುರಿತು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಪ್ರಸ್ತುತ ಸರ್ಕಾರಿ ನೌಕರರ ಕೆಲಸ ಅವಧಿ:
* ವರ್ಷದಲ್ಲಿ 98 ದಿನ ರಜೆ
* ಹಬ್ಬ, ಜಯಂತಿಗಳು ಸೇರಿ 34 ದಿನ ರಜೆ
* ಎರಡನೇ ಶನಿವಾರದ ರಜೆ 12
* ಭಾನುವಾರದ ರಜೆ 52
* ಕೆಲಸದ ಅವಧಿ ಬೆಳಗ್ಗೆ 10.30 ರಿಂದ ಸಂಜೆ 5.30
ಪ್ರಸ್ತಾಪಿತ ಅಂಶಗಳು:
* ಎರಡನೇ ಶನಿವಾರದ ಜೊತೆ ನಾಲ್ಕನೇ ಶನಿವಾರವೂ ರಜೆ
* ವಾರದಲ್ಲಿ 5 ದಿನ ಕೆಲಸ, 2 ದಿನ ರಜೆ
* ಕೆಲಸದ ಅವಧಿ 9 ಗಂಟೆಯಿಂದ ಸಂಜೆ 6 ಗಂಟೆಗೆ ಹೆಚ್ಚಳ
* 15 ಸಾಂದರ್ಭಿಕ ರಜೆ 8ಕ್ಕೆ ಇಳಿಕೆ
* ಜಯಂತಿಗಳ ಸರ್ಕಾರಿ ರಜೆ ರದ್ದು
* ನಿವೃತ್ತಿ ಬಳಿಕದ ಸೌಲಭ್ಯ ಪಡೆಯಲು ಸೇವಾವಧಿ 33 ವರ್ಷಗಳಿಂದ 30ಕ್ಕೆ ಇಳಿಕೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv