ಮೈಸೂರು: ವಿಶ್ವ ವಿಖ್ಯಾತ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ವಿಚಾರದಲ್ಲಿ ಒಂದು ಸಿಹಿ ಸುದ್ದಿ ಇನ್ನೊಂದು ಕಹಿ ಸುದ್ದಿ ಇದೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯವು ಮೈಸೂರಿಗೆ ಬರುವ ಪ್ರವಾಸಿಗರಲ್ಲಿ ಕಿರಿಯರಿಂದ ಹಿರಿಯರವರಗೆ ಹಾಟ್ ಫೇವರೆಟ್ ಪ್ಲೇಸ್ ಆಗಿದೆ. ಮೃಗಾಲಯಕ್ಕೆ ದೇಶ-ವಿದೇಶದಿಂದ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈಗ ಇಲ್ಲಿಗೆ ಬರುವ ಪ್ರವಾಸಿಗರ ಜೇಬಿಗೆ ಮೃಗಾಲಯ ಪ್ರಾಧಿಕಾರ ಬರೆ ಹಾಕಿದೆ.
Advertisement
Advertisement
ಒಂದು ವರ್ಷದ ಅಂತರಕ್ಕೆ ಮೃಗಾಲಯದ ಪ್ರವೇಶ ದರ ಡಬಲ್ ಆಗಿದೆ. ಇದು ಮೃಗಾಲಯ ವಿಚಾರದ ಕಹಿ ಸುದ್ದಿ. ಮೃಗಾಲಯದ ಹೊಸ ದರ ಪಟ್ಟಿಯ ಪ್ರಕಾರ 20 ರಿಂದ 30 ರೂ. ಪ್ರವೇಶ ದರ ಹೆಚ್ಚಳವಾಗಿದೆ. ಮೃಗಾಲಯ ಅಧಿಕಾರಿಗಳು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಿಬ್ಬಂದಿ ಸಂಬಳ, ಮೃಗಾಲಯ ಮೆಂಟೆನೆನ್ಸ್ ಕಾಸ್ಟ್ ಹೆಚ್ಚಾಗಿದ್ದರಿಂದ ದರ ಹೆಚ್ಚಳ ಅನಿವಾರ್ಯ ಎನ್ನುತ್ತಿದ್ದಾರೆ.
Advertisement
ಒಂದೆಡೆ ದರ ಹೆಚ್ಚಳ ಪ್ರವಾಸಿಗರಿಗೆ ಕಹಿ ಸುದ್ದಿ ಆದರೆ ಸಿಹಿ ಸುದ್ದಿ ಕೂಡ ಇದೆ. ಮೃಗಾಲಯಕ್ಕೆ ಹೊಸದಾಗಿ ಗುಜರಾತ್‍ನಿಂದ 5 ಸಿಂಹಗಳು ಬರುತ್ತಿದೆ. ಗುಜರಾತ್‍ನಿಂದ ಎರಡು ಗಂಡು ಮೂರು ಹೆಣ್ಣು ಸಿಂಹಗಳನ್ನು ತರಲಾಗುತ್ತಿದೆ. ಈಗಾಗಲೇ ಎಲ್ಲಾ ಪ್ರಕ್ರಿಯೆ ಮುಗಿದಿದೆ.
Advertisement
ಪ್ರವೇಶ ದರ ಪಟ್ಟಿ:
ಹಳೆ ದರ 60 ರೂ ಇದ್ದು, ಹೊಸ ದರ 80 ರೂ. ಆಗಿದೆ. 20 ರೂ. ಹೆಚ್ಚಳ ಆಗಿದೆ. ಮಕ್ಕಳಿಗೆ ಮೊದಲಿನ ದರ 30 ಇತ್ತು. ಆದರೆ ಈಗ 40 ರೂ. ಆಗಿದ್ದು, 10 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ವಯಸ್ಕರಿಗೆ ಹಳೆ ದರ 80 ಇದ್ದು, ಹೊಸ ದರ 100 ಆಗಿದೆ. ಒಟ್ಟು 20 ರೂ. ಹೆಚ್ಚಳ ಆಗಿದೆ. ವಾರಂತ್ಯದಲ್ಲಿ ಮಕ್ಕಳಿಗಾಗಿ ಮೊದಲು 40 ರೂ. ಇತ್ತು. ಆದರೆ ಈಗ 50 ರೂ. ಆಗಿದ್ದು, 10 ರೂ. ಹೆಚ್ಚಾಗಿದೆ.
ಬ್ಯಾಟರಿ ಚಾಲಿತ ವಾಹನ ದರ ಪಟ್ಟಿ( ವಿಕೆಂಡ್)
ಹಳೆ ದರ 150 ಇದ್ದು, ಈಗ 180 ರೂ. ಹೆಚ್ಚಾಗಿದೆ. ವಾರಂತ್ಯದಲ್ಲಿ ಒಟ್ಟು 30 ರೂ. ಹೆಚ್ಚಾಗಿದೆ. ಬ್ಯಾಟರಿ ಚಾಲಿತ ವಾಹನ ಮಕ್ಕಳಿಗೆ ಮೊದಲು 90 ರೂ ಇದ್ದು, ಈಗ 100 ರೂ. ಆಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]