0.099 ಸೆಕೆಂಡ್‍ಗಳಲ್ಲಿ ಧೋನಿ ಮ್ಯಾಜಿಕ್ ಸ್ಟಂಪಿಂಗ್ – ಕಿವೀಸ್ ಪಂದ್ಯದಲ್ಲಿ ವಿಶ್ವ ದಾಖಲೆ

Public TV
1 Min Read
dhoni s

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಸ್ಟಂಪಿಂಗ್ ಮೂಲಕ ಅಭಿಮಾನಿಗಳ ಮನಗೆದಿದ್ದು, ಕೇವಲ 0.099 ಸೆಕೆಂಡ್ ಗಳಲ್ಲಿ ಸಿಫರ್ಡ್ ಅವರನ್ನು ಸ್ಟಂಪಿಂಗ್ ಮಾಡಿದ್ದಾರೆ.

37 ವರ್ಷದ ಧೋನಿ ತಮ್ಮ ವೇಗದ ಸ್ಟಂಪಿಂಗ್ ಗಳ ಮೂಲವೇ ಅಭಿಮಾನಿಗಳು ಮನಗೆದ್ದಿದ್ದು, ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 25 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಸಿಫರ್ಡ್ ರನ್ನು ಪೆವಿಲಿಯನ್‍ಗಟ್ಟಲು ಯಶಸ್ವಿಯಾದರು. 7ನೇ ಓವರಿನ 4ನೇ ಎಸೆತದಲ್ಲಿ ಮ್ಯಾಜಿಕ್ ಸ್ಟಂಪಿಂಗ್ ದಾಖಲಾಗಿದ್ದು, ಈ ಮೂಲಕ ವೃತ್ತಿ ಜೀವನದಲ್ಲಿ 34ನೇ ಸ್ಟಂಪಿಂಗ್ ಪೂರ್ಣಗೊಳಸಿ ದಾಖಲೆ ಬರೆದರು.

DzB0eu1U0AEaqNT

ಇದೇ ಟೂರ್ನಿಯಲ್ಲಿ ಧೋನಿ ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಲರ್ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ್ದರು. ಸದ್ಯ ಧೋನಿ ಟಿ20 ಮಾದರಿಯಲ್ಲಿ 89 ಬಲಿ ಪಡೆದಿದ್ದು, ಈ ಮೂಲಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಇದರಲ್ಲಿ 55 ಕ್ಯಾಚ್ ಗಳು ಸೇರಿದೆ. ಉಳಿದಂತೆ 337 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 311 ಕ್ಯಾಚ್ ಹಾಗೂ 119 ಸ್ಟಂಪಿಂಗ್ ಮಾಡಿದ್ದಾರೆ.

https://twitter.com/RamLokendar/status/1094504403141156865?

ಧೋನಿ ಇದುವರೆಗೂ 524 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ಬರೆದರು. 90 ಟೆಸ್ಟ್ ಪಂದ್ಯ, 338 ಏಕದಿನ ಹಾಗು 96 ಟಿ20 ಪಂದ್ಯಗಳಲ್ಲಿ ಧೋನಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳು ಸೇರಿದಂತೆ ಧೋನಿ ಇದುವರೆಗೂ 300 ಟಿ20 ಪಂದ್ಯಗಳನ್ನು ಆಡಿದ್ದು, ಈ ಮಾದರಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ಭಾರತ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಪಟ್ಟಿಯಲ್ಲಿ 298 ಪಂದ್ಯಗಳಾಡಿರುವ ರೋಹಿತ್ 2ನೇ ಸ್ಥಾನದಲ್ಲಿದ್ದು, ರೈನಾ 296 ಪಂದ್ಯಗಳ ಮೂಲಕ 3ನೇ ಸ್ಥಾನ ಪಡೆದಿದ್ದಾರೆ.

https://twitter.com/thota_deep/status/1094502082915250176?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *