ಕೋಲಾರ: ಸ್ವಚ್ಛ ಭಾರತ್ ಮಿಷನ್ (Swachh Bharat Mission) ಯೋಜನೆಯಡಿ ನಗರದ ತ್ಯಾಜ್ಯ ನಿರ್ವಹಣೆಗೆ 8 ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಖರೀದಿಸಿದ್ದು, ಇದರಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸಾರ್ವಜನಿಕರ ಹುಬ್ಬೇರಿಸುವಂತೆ ಮಾಡಿದೆ. 16 ಸಾವಿರದ ರೂ ಚಾರ್ಜಿಂಗ್ ಪಿನ್‌ಗೆ 5 ಲಕ್ಷ ರೂ. ಬಿಲ್ ತೋರಿಸಿರುವ ಭಾರೀ ಗೋಲ್‌ಮಾಲ್ ನಡೆದಿದೆ.
ನಾಲ್ಕೈದು ತಿಂಗಳು ಕಳೆದರೂ ನಿಂತಲ್ಲೇ ನಿಂತಿರುವ ಕಸ ಎತ್ತುವ ವಾಹನಗಳು, ಮತ್ತೊಂದೆಡೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ (Charging Point) ಆಗಿರುವ ಗೋಲ್ ಮಾಲ್ ಕುರಿತು ನಗರಸಭೆಯಲ್ಲಿ ಸದಸ್ಯರು ಆರೋಪಿಸಿದ್ದಾರೆ. ಘನ ತ್ಯಾಜ್ಯ ವಿಲೇವಾರಿಗಾಗಿ ಸುಮಾರು 8 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ್ದಾರೆ. ಇದರ ಜೊತೆಗೆ ವಾಹನಗಳ ಚಾರ್ಜಿಂಗ್‌ಗಾಗಿ ಖರೀದಿ ಮಾಡಿರುವ ಚಾರ್ಜಿಂಗ್ ಪಾಯಿಂಟ್‌ನ ಮೊತ್ತದ ಬಗ್ಗೆ ಅವ್ಯವಹಾರದ ಶಂಕೆಯನ್ನು ವ್ಯಕ್ತಪಡಿಸಿದ್ದು, ಜೊತೆಗೆ ತನಿಖೆಗೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
Advertisement
Advertisement
ನಗರಸಭೆ ಅಧಿಕಾರಿಗಳು 2023ರ ಡಿಸೆಂಬರ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ 1 ಯೋಜನೆಯಡಿ, ಘನತ್ಯಾಜ್ಯ ವಸ್ತು ನಿರ್ವಹಣೆ ಸಂಬಂಧ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಖರೀದಿಗಾಗಿ ಜಿಲ್ಲಾಧಿಕಾರಿಗಳಿಗೆ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಲಿಸಿದ್ದರು. ಅದರಲ್ಲಿ ಎರಡು ಉಪಕರಣ ಖರೀದಿಗೆ ಬರೋಬ್ಬರಿ 8 ಲಕ್ಷ ರೂ. ಆಗಬಹುದೆಂದು ಅಂದಾಜು ಮೊತ್ತವನ್ನು ನಗರಸಭೆ ನಮೂದಿಸಿತ್ತು.
Advertisement
ಜಿಲ್ಲಾಧಿಕಾರಿಯು ಕೆಲ ಷರತ್ತುಗಳೊಂದಿಗೆ ಜ.1ರಂದು ಕ್ರಿಯಾಯೋಜನೆಗೆ ಅನುಮೋದನೆಯನ್ನು ನೀಡಿದ್ದರು. ಎರಡು ಉಪಕರಣಗಳಿಗೆ ಬಿಲ್ 6.77 ಲಕ್ಷ ರೂ. ಹಾಗೂ ಜಿಎಸ್‌ಟಿ 1.22 ಲಕ್ಷ ಸೇರಿ ಒಟ್ಟು 8 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ. ಆದರೆ ಇದೇ ಉಪಕರಣಕ್ಕೆ ಕಂಪನಿಯ ವೆಬ್‌ಸೈಟ್‌ನಲ್ಲಿರುವ ಮೌಲ್ಯ ಒಂದಕ್ಕೆ 16,500 ರೂ. ಆಗಿರುವುದರಿಂದ ಸದಸ್ಯರು ಇದರಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
Advertisement
ನಗರಸಭೆ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಒಂದಕ್ಕೆ 3.38 ಲಕ್ಷ ರೂ.ನಂತೆ ಖರೀದಿಸಲಾಗಿದೆ. ಎರಡಕ್ಕೂ ಜಿಎಸ್‌ಟಿ ಸೇರಿ ಬರೋಬ್ಬರಿ 7.99 ಲಕ್ಷ ರೂ. ಬಿಲ್ ಆಗಿದೆ. ಖರೀದಿ ಮಾಡಿರುವ ಬೋಲ್ಟ್ ಅರ್ತ್ ಕಂಪನಿಯ ಈ ಜಾರ್ಜಿಂಗ್ ಪಾಯಿಂಟ್‌ನ ಮಾರುಕಟ್ಟೆ ಮೌಲ್ಯ ಒಂದಕ್ಕೆ ಕೇವಲ 16,500 ರೂ. ಇದೆ. ಬೋಲ್ಟ್ ಅರ್ತ್ ಕಂಪನಿಯ ವೆಬ್‌ಸೈಟ್ ಪರಿಶೀಲಿಸಿದಾಗಲೂ ಇದೇ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಶಾಸಕ ಕೊತ್ತೂರು ಮಂಜುನಾಥ್, ಈ ಉಪಕರಣಗಳನ್ನು ನಗರಸಭೆ ಹೆಸರಿನಲ್ಲಿ ಬೆಂಗಳೂರಿನ ಇನ್‌ಫ್ಯಾಂಟ್ರಿ ರಸ್ತೆ ಬಳಿಯ ಅಲ್ಫಾ ಟೆಕ್ನಾಲಾಜಿಸ್‌ನಿಂದ ಜುಲೈ 19ರಂದು ಖರೀದಿಸಿರುವ ಬಗ್ಗೆ ಮಾಹಿತಿಯಿದ್ದು, ಜಾರ್ಜಿಂಗ್ ಪಾಯಿಂಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಂದು ಚಾರ್ಜಿಂಗ್ ಪಾಯಿಂಟ್ ಉಪಕರಣವನ್ನು ಕೋಲಾರ ನಗರಸಭೆ ಕಚೇರಿಯ ಆವರಣದಲ್ಲಿ ಅಳವಡಿಸಲಾಗಿದೆ. ಮತ್ತೊಂದು ಉಪಕರಣವನ್ನು ಕೆಂದಟ್ಟಿಯ ಎಸ್‌ಟಿಪಿ ಘಟಕದಲ್ಲಿ ಅಳವಡಿಸಲಾಗಿದೆ. ಇನ್ನು ಜಾರ್ಜಿಂಗ್ ಪಾಯಿಂಟ್‌ನಲ್ಲಿ ಯಾವುದೇ ರೀತಿಯ ಗೋಲ್ ಮಾಲ್ ನಡೆದಿಲ್ಲ, ಥರ್ಢ್ ಪಾರ್ಟಿ ಪರಿಶೀಲನೆ ಸಹ ನಡೆಸಲಾಗಿದೆ. ಪ್ಯಾಕೇಜ್ ಸಿಸ್ಟಮ್‌ನಲ್ಲಿ ಖರೀದಿ ಮಾಡಲಾಗಿದ್ದು, ಇದರಲ್ಲಿ ಯಾವುದೇ ಲೋಪವಾಗಿಲ್ಲ. ಇನ್ನು ನೊಂದಣಿಯಾಗದೆ ನಿಂತಿರುವ ವಾಹನವನ್ನು ಕೂಡಲೇ ನೋಂದಣಿ ಮಾಡಿಸಿ ವಾಹನಗಳನ್ನು ನಗರದ ಸ್ವಚ್ಛತೆಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್‌ನಲ್ಲಿ ಖರೀದಿ ಮಾಡಿರುವ ಜಾರ್ಜಿಂಗ್ ಪಾಯಿಂಟ್ ಬಗ್ಗೆ ಹಾಗೂ ಗೋಲ್ ಮಾಲ್ ಕುರಿತು ನಗರ ಸಭೆ ಸದಸ್ಯರೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಶೀಲನೆ ಮಾಡಿ ಸತ್ಯಾಸತ್ಯೆಯನ್ನು ಹೊರತರಬೇಕು ಎಂಬುದು ಜನರ ಆಶಯವಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!