Bollywood
ಅಭಿಮಾನಿಗಳಿಗೆ ದಸರಾ ಗಿಫ್ಟ್ ಕೊಡಲಿದ್ದಾರೆ ಅಜಯ್ ದೇವಗನ್!
ಮುಂಬೈ: ನಟ ಅಜಯ್ ದೇವಗನ್ ತಮ್ಮ ದಸರಾ ಹಬ್ಬದಂದು ತಮ್ಮ ಮುಂಬರುವ `ಗೋಲ್ಮಾಲ್ ಅಗೇನ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಗಿಫ್ಟ್ ಕೊಡಲಿದ್ದಾರೆ.
ಕಳೆದ ವಾರ ತೆರೆಕಂಡಿರೋ ಅಜಯ್ ನಟನೆಯ `ಬಾದ್ ಶಾಹೋ’ ಬಾಕ್ಸ್ ಆಫೀಸ್ ನಲ್ಲಿ ಹಣ ದೋಚುತ್ತಿದೆ. ಸಿನಿಮಾ ಇದೂವರೆಗೂ ಬರೋಬ್ಬರಿ 70 ಕೋಟಿ ರೂ.ಗೆ ಅಧಿಕ ಸಂಪಾದನೆ ಮಾಡಿದೆ ಎಂದು ಚಿತ್ರದ ಮೂಲಗಳು ಸ್ಪಷ್ಟಪಡಿಸಿವೆ.
ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರದ ಮೊದಲ ಟ್ರೇಲರ್ ಸೆಪ್ಟಂಬರ್ 29ರಂದು ಬಿಡುಗಡೆಯಾಗಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗೆಯಗಾಲಿದೆ.
ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ.
https://www.instagram.com/p/BY1bgkYDLZm/?tagged=golmaalagain
