ದಿಗಂತ್, ಪ್ರಜ್ವಲ್ ಗೆ ಗೋಲ್ಡನ್ ಸ್ಟಾರ್ ಗಣೇಶ್ ಓಪನ್ ಚಾಲೆಂಜ್!

Public TV
1 Min Read
GANESH DIGHANT PRAJWAL

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಮುಂದಿನ ‘ಚಮಕ್’ ಚಿತ್ರಕ್ಕೆ ಸಾಕಷ್ಟು ವರ್ಕೌಟ್ ನಡೆಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಗಣೇಶ್ ಮುವಾಯ್ ಥಾಯ್ ಕಲಿಯುತ್ತಿದ್ದು, ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಗೆ ಕಾಲಿನ ಕಿಕ್ ಮೂಲಕ ಕೈಯಲ್ಲಿರುವ ಕಲ್ಲಂಗಡಿಯನ್ನು ಹೊಡೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚಾಲೆಂಜ್ ಮಾಡಿದ್ದಾರೆ.

ಪ್ರಜ್ವಲ್, ದಿಗಂತ್ ಹಾಗೂ ಗಣೇಶ್ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹಿತರು. ನಟ ಗಣೇಶ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಬಹಿರಂಗವಾಗಿ ತಮ್ಮ ಗೆಳೆಯರಿಗೆ ಸವಾಲೆಸೆದಿದ್ದಾರೆ. ಗಣೇಶ್ ಈಗ ಮುವಾಯ್ ಥಾಯ್ ಕಲಿಯುತ್ತಿದ್ದು, ಸತತ ಮೂರು ತಿಂಗಳಿಂದ ತರಬೇತಿ ಪಡೆದಿದ್ದಾರೆ. ಮುವಾಯ್ ಥಾಯ್ ನ ಭಾರತೀಯ ರಾಯಭಾರಿ ಕೂಡ ಆಗಿದ್ದಾರೆ.

ಕಾಲಿನಲ್ಲಿ ಕಿಕ್ ಮಾಡುವ ಮೂಲಕ ಕೈಯಲ್ಲಿರುವ ಕಲ್ಲಂಗಡಿಯನ್ನು ಪ್ರಜ್ವಲ್ ಹಾಗೂ ದಿಗಂತ್ ಹೊಡೆಯಬೇಕು ಎಂದು ಗಣೇಶ್ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ್ದಾರೆ. ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಬಹುದು ಎಂದು ಹೇಳಿದ್ದಾರೆ.

ಗಣೇಶ್ ಹಾಕಿದ ಚಾಲೆಂಜ್ ನನ್ನು ಪ್ರಜ್ವಲ್ ದೇವರಾಜ್ ಹಾಗೂ ದೂದ್ ಪೇಡ ದಿಗಂತ್ ಸ್ವೀಕರಿಸುತ್ತಾರಾ ಎಂದು ನೋಡಬೇಕಾಗಿದೆ. ಮುಗಳುನಗೆ ಸಿನಿಮಾದ ಯಶಸ್ಸಿನ ನಂತರ ಗಣೇಶ್ ಚಮಕ್ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

 

Ganesh 5

Ganesh 4

Ganesh 3

Ganesh 2

KWR GANESH AV 2 ganesh

Share This Article
Leave a Comment

Leave a Reply

Your email address will not be published. Required fields are marked *