CinemaKarnatakaLatestMain PostTV Shows

ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

ನ್ನಡದ ಸ್ಟಾರ್ ಸುವರ್ಣ ವಾಹಿನಿಯು ಹೊಸ ರಿಯಾಲಿಟಿ ಶೋ ಶುರು ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಇಸ್ಮಾರ್ಟ್ ಜೋಡಿ ಎಂದು ಹೆಸರಿಡಲಾಗಿದೆ. ಈ ಶೋ ವಿಶೇಷ ಅಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುತ್ತಿದ್ದಾರೆ. ತಮ್ಮ ಲವಲವಿಕೆಯ ಮಾತಿನ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ನೂತನ ಕಾನ್ಸೆಪ್ಟ್ ಜೊತೆ ಸಿದ್ಧವಾಗಿರುವ ಇಸ್ಮಾರ್ಟ್ ಜೋಡಿ ಶೋ ಇದೇ ಜುಲೈ 16 ರಿಂದ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಈಗಾಗಲೇ ಸಿನಿಮಾಗಳ ಜೊತೆ ಕಿರುತೆರೆಯಲ್ಲೂ ಮಿಂಚುತ್ತಿರುವ ಗಣೇಶ್, ಈ ಶೋಗಾಗಿ ಬೇರೆ ರೀತಿಯಲ್ಲೇ ಸಿದ್ಧತೆ ಮಾಡಿಕೊಂಡಿದ್ದಾರಂತೆ. ಹಾಗಾಗಿ ಇಸ್ಮಾರ್ಟ್ ಜೋಡಿಯ ಶಕ್ತಿಯೇ ಗಣೇಶ್ ಎಂದಿದೆ ಸ್ಟಾರ್ ಸುವರ್ಣ ವಾಹಿನಿ. ಈ ಶೋಗಾಗಿ ಅದ್ಧೂರಿ ಸೆಟ್ ಕೂಡ ಹಾಕಲಾಗಿದ್ದು, ಆಲ್ ಓಕೆ ಅಲೋಕ್ ಸಂಯೋಜಿಸಿದ ಹಾಡು ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡಲಿದೆ. ಇದೊಂದು ರೊಮ್ಯಾಂಟಿಕ್ ಶೋ ಆಗಿದ್ದು, ವರ್ಣರಂಜಿತ ಸೆಟ್ ನಲ್ಲೇ ಬಹುತೇಕ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

ಶೋನಲ್ಲಿ ಭಾಗಿಯಾಗಲು ಈಗಾಗಲೇ ಜನಪ್ರಿಯ ಜೋಡಿಗಳು ಸಜ್ಜಾಗಿದ್ದು, ಆ ಜೋಡಿಗಳು ಯಾವವು? ಯಾರೆಲ್ಲ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನುವುದನ್ನು ಜುಲೈ 16 ರಂದೇ ತೆರೆಯ ಮೇಲೆ ನೋಡಿ ಎಂದಿದೆ ಸ್ಟಾರ್ ಸುವರ್ಣ ವಾಹಿನಿ. ಈ ಜೋಡಿಗಳನ್ನು ಪರಿಚಯಿಸುವುದಕ್ಕಾಗಿಯೇ ಅಂದು ಗ್ರ್ಯಾಂಡ್ ಲಾಂಚ್ ಎಪಿಸೋಡ್ ಸಿದ್ಧ ಮಾಡಿಕೊಳ್ಳಲಾಗಿದೆ. ಈ ಜೋಡಿಯು ಪ್ರೇಕ್ಷಕರನ್ನು ರಮಿಸಿ, ಕುಣಿಸಿ, ನಗಿಸಿ, ಆಡಿಸಿ, ಬೀಳಿಸಿ ಒಟ್ಟಾರೆಯಾಗಿ ವೀಕೆಂಡ್ ಅನ್ನು ಭರಪೂರ ಮನರಂಜನೆ ನೀಡುವ ಕೆಲಸ ಮಾಡಲಿದೆಯಂತೆ.

Live Tv

Leave a Reply

Your email address will not be published.

Back to top button