Connect with us

Cinema

ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

Published

on

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅದಾಗಲೇ ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ನಾನಾ ಥರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ತರದಲ್ಲಿ ಆಕರ್ಷಣೆಗಳನ್ನೂ ಹೊಂದಿರೋ ಆರೆಂಜ್‍ನಲ್ಲಿ ರವಿಶಂಕರ್ ಗೌಡ ಡಿಫರೆಂಟಾದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ!

ರವಿಶಂಕರ್ ಗೌಡ ಮತ್ತು ಗಣೇಶ್ ನಿಜ ಜೀವನದಲ್ಲಿಯೂ ಸ್ನೇಹಿತರು. ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಆರೆಂಜ್ ಚಿತ್ರದಲ್ಲಿಯೂ ಅದು ಮುಂದುವರೆದಿದೆ.

ಈ ಚಿತ್ರದಲ್ಲಿಯೂ ಗಣೇಶ್ ಸ್ನೇಹಿತನಾಗಿ ನಟಿಸಿರೋ ರವಿಶಂಕರ್ ನಿಜವಾದ ಗೋಲ್ಡನ್ ಸ್ಟಾರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿರುದಿನ ಗಣೇಶ್ ಪಕ್ಕದಲ್ಲಿಯೇ ಇರುವಾಗ ರವಿಶಂಕರ್ ಹೇಗೆ ಗೋಲ್ಡನ್ ಸ್ಟಾರ್ ಆಗಲು ಸಾಧ್ಯ ಎಂಬ ಪ್ರಶ್ನೆ ಇದ್ದರೆ ಅದಕ್ಕೆ ಆರೆಂಜ್‍ನಲ್ಲಿ ಮಜವಾದ ಉತ್ತರ ಸಿಗಲಿದೆಯಂತೆ.

ಒಂದರ್ಥದಲ್ಲಿ ಆರೆಂಜ್ ಚಿತ್ರದಲ್ಲಿ ರವಿಶಂಕರ್ ಅವರದ್ದು ಗೋಲ್ಡನ್ ಮ್ಯಾನ್ ಗೆಟಪ್ಪು. ಅದರ ಅಸಲಿ ಅಂದವನ್ನು ಆಸ್ವಾದಿಸಲು ಇನ್ನೊಂದು ವಾರ ಕಾಯಬೇಕಿದೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *