ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ: ಖಡಕ್ ಡೈಲಾಗ್ ಹೊಡೆದ ಗಣೇಶ್

Public TV
1 Min Read
golden star ganesh

ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಟೀಸರ್‌ನಲ್ಲಿ ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ ಎಂದು ನಟ ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಪಿನಾಕ’ (Pinaka) ಎಂಬ ವಿಭಿನ್ನ ಕಥೆ ಹೇಳೋಕೆ ಗಣೇಶ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ಐಶ್ವರ್ಯಾಗೆ ಲೈನ್‌ ಹೊಡೀತಿದ್ರಾ ಅಂತ ನನಗೆ ಡೌಟ್‌: ಧನರಾಜ್‌ಗೆ ಪತ್ನಿ ಫುಲ್‌ ಕ್ಲಾಸ್

ganesh

ತೆಲುಗಿನ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆಯು ಗಣೇಶ್ ಅವರ ‘ಪಿನಾಕ’ ಚಿತ್ರವನ್ನು ನಿರ್ಮಾಣ ಮಾಡಲಿದೆ. ಧನಂಜಯ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾಗೆ ‘ಪಿನಾಕ’ ಎಂಬ ಟೈಟಲ್ ಫಿಕ್ಸ್ ಆಗಿದೆ. ಒಮ್ಮೆ ಮಂತ್ರದಂಡ, ಮತ್ತೊಮ್ಮೆ ತ್ರಿಶೂಲ ಹಿಡಿದು ಗೋಲ್ಡನ್ ಸ್ಟಾರ್ ಅಬ್ಬರಿಸಿದ್ದಾರೆ. ರುದ್ರನಾಗಿ ಕ್ಷುದ್ರ ಶಕ್ತಿಗೆ ಸವಾಲು ಹಾಕಿದ್ದಾರೆ. ಎಂದೂ ಕಾಣಿಸಿಕೊಂಡಿರದ ನಟನ ಈ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಟಿ.ಜಿ. ಕೃತಿ ಪ್ರಸಾದ್ ಎಂಬುವವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಇದೊಂದು ಫ್ಯಾಂಟಸಿ ಆ್ಯಕ್ಷನ್ ಸಿನಿಮಾ ಆಗಿದೆ. ಮೊದಲ ನೋಟದಲ್ಲೇ ‘ಪಿನಾಕ’ ಟೀಸರ್ ಗಮನ ಸೆಳೆಯುವಂತಿದೆ. ಪಿನಾಕ ಚಿತ್ರವು ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆಯಾಗಿದೆ. ಇನ್ನೂ ಪಿನಾಕ ಎಂದರೆ ಶಿವನ ಬಿಲ್ಲು ಎಂದರ್ಥ. ಶಿವ ಬಳಸೋ ಬಿಲ್ಲಿಗೇನೆ ‘ಪಿನಾಕ’ ಎಂದು ಕರೆಯುತ್ತಾರೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಟೀಸರ್‌ನಲ್ಲಿ ತಿಳಿಯಲಿದೆ. ಕಥೆ ಈ ಟೈಟಲ್‌ ಪೂರಕವಾಗಿದೆ.

‘ಪಿನಾಕ’ ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಮೂಡಿ ಬರಲಿದೆ. ಸದಾ ಲವರ್ ಬಾಯ್ ಆಗಿ ಮಿಂಚುತ್ತಿದ್ದ ಗಣೇಶ್ ಈ ಬಾರಿ ಲವ್ ಸ್ಟೋರಿ ಬದಿಗಿಟ್ಟು ಹೊಸ ಅವತಾರ ತಾಳಿದ್ದಾರೆ. ಇದು ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ. ಜೊತೆಗೆ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

Share This Article