ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಸಾರಥ್ಯದಲ್ಲಿ ಪ್ಯಾನ್‌ ಇಂಡಿಯಾದತ್ತ ಗಣೇಶ್ ಗೋಲ್ಡನ್ ಹೆಜ್ಜೆ

Public TV
2 Min Read
ganesh

ಸ್ಯಾಂಡಲ್‌ವುಡ್‌ನ (Sandalwood) ಗೋಲ್ಡನ್ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರು ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ, ನಿರ್ಮಾಪಕನಾಗಿ ಗೆದ್ದಿರುವ ನಟ ಗಣೇಶ್ ಅವರು ಈಗ ವಿಖ್ಯಾತ ಚಿತ್ರ ಪ್ರೊಡಕ್ಷನ್ ಸಂಸ್ಥೆ ಜೊತೆ ಕೈಜೋಡಿಸಿದ್ದಾರೆ. ಈ ಮೂಲಕ ನಟ ಗಣೇಶ್, ಪ್ಯಾನ್ ಇಂಡಿಯಾದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.‌ ಇದನ್ನೂ ಓದಿ:ಅಣ್ಣಾಮಲೈಯಾರ್ ದೇವಸ್ಥಾನದಲ್ಲಿ ರಜನಿಕಾಂತ್

Ganesh 1

ಇಂದು ಭಾನುವಾರ (ಜುಲೈ 2) ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟಿರುವ ಗಣೇಶ್ ಅವರ ಬರ್ತ್ ಡೇ ಗಿಫ್ಟ್ ಎಂಬಂತೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಕಡೆಯಿಂದೊಂದು ಬಿಗ್ ಅನೌನ್ಸ್‌ಮೆಂಟ್ ಹೊರಬಿದ್ದಿದೆ. ಇದುವರೆಗೂ ವಿಶಿಷ್ಟ ಕಥೆಯನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ಗಣೇಶ್ ಅವರಿಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ganesh 1

ಚೆಲ್ಲಾಟ, ಮುಂಗಾರುಮಳೆ, ಸಿನಿಮಾಗಳ ಮೂಲಕ ಸಿನಿ ಕೆರಿಯರ್ ಶುರು ಮಾಡಿದ ಪ್ರತಿಭಾನ್ವಿತ ನಟ ಗಣೇಶ್ ಇಂದು ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ನಟನಾಗಿ ಮಿಂಚ್ತಿದ್ದಾರೆ. ಸದಾ ಭಿನ್ನ ಕಥೆಯಲ್ಲಿ ಕಾಣಿಸಿಕೊಳ್ಳುವ ಗಣೇಶ್ ಅವರು ಈಗ ಪ್ಯಾನ್ ಇಂಡಿಯಾ ಚಿತ್ರಕ್ಕೆ ಓಕೆ ಎಂದಿದ್ದಾರೆ. ಇನ್ನೂ ವಿಶೇಷತೆಗಳ ಬಗ್ಗೆ ಹೇಳೋದಾದರೆ, ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ 42ನೇ ಚಿತ್ರವಾಗಿದೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ 6ನೇ ಚಿತ್ರ ಇದಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ತಯಾರಿ ಮಾಡ್ತಿದ್ದಾರೆ. ಇದೀಗ ಸಿನಿಮಾ ಬಗೆಗಿನ ತಯಾರಿಗಳು ಚಾಲ್ತಿಯಲ್ಲಿವೆ. ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ರಿವೀಲ್ ಆಗಲಿದೆ.

ganesh

ಸದ್ಯ ಗಣೇಶ್ ನಟನೆಯ 42ನೇ ಸಿನಿಮಾದ ಲುಕ್ ವಿಭಿನ್ನವಾಗಿದ್ದು, ಕೇಸರಿ ಬಣ್ಣದ ಧಿರಿಸಿನಲ್ಲಿ ನಟ ಗಣೇಶ್ ಬ್ಲ್ಯಾಕ್ ಸೈಡ್ ಪೋಸ್ ಖಡಕ್ ಆಗಿದೆ. ‌ಗಣೇಶ್‌ ಅವರ ನಯಾ ಲುಕ್‌ ನೋಡ್ತಿದ್ದಂತೆ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ತಮ್ಮ ಹುಟ್ಟುಹಬ್ಬದ ದಿನ ಬಿಗ್‌ ನ್ಯೂಸ್‌ ಕೊಟ್ಟಿರುವ ನಟ ಗಣೇಶ್‌ಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

Share This Article