ಬೆಂಗಳೂರು: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತವಾಗಿ ಇಂದು ಸಾಮಾನ್ಯ ಜನರಿಂದ ಭಾರತದ ತಾರೆಯರು ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಸ್ಯಾಂಡಲ್‍ವುಡ್ ಗೋಲ್ದನ್ ಸ್ಟಾರ್ ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಯೋಗಭ್ಯಾಸವನ್ನು ಮಾಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ನಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರಾ ಹಾಗೂ ಪುತ್ರ ವಿಹಾನ್‍ನೊಂದಿಗೆ ಯೋಗ ಮಾಡಿದ್ದು, ತನ್ನ ತಂದೆ ಜೊತೆ ಸೇರಿ ಮಗಳು ಚಾರಿತ್ರ್ಯಾ ಕೂಡ ಯೋಗ ಮಾಡಿದ್ದಾರೆ. ಚಾರಿತ್ರ್ಯಾ ಕಷ್ಟ ಇರುವ ಆಸನಗಳನ್ನೆಲ್ಲಾ ತನ್ನ ತಂದೆ ಜೊತೆ ಮಾಡಿ ತೋರಿಸಿದ್ದಾರೆ.
Advertisement
ಗಣೇಶ್ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ದಿನ ಜಿಮ್‍ಗೆ ಹೋಗಿ ಯೋಗವನ್ನು ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಗಣೇಶ್ ತಮ್ಮ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದೆ.