ಸದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅನಿರೀಕ್ಷಿತ ಪ್ರಶಸ್ತಿಯೊಂದು ಸಂದಿದೆ. ಹಾಲಿವುಡ್ ನ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯು ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಬಂದಿದೆ. ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಸಿನಿಮಾ, ಈ ಸಲ ಬಂಗಾರದ ಪದಕವನ್ನೇ ಬೇಟೆಯಾಡಿದೆ.
Advertisement
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ‘ನಾಟು ನಾಟು’ ಹಾಡಿಗೆ ಈ ಪ್ರಶಸ್ತಿ ಬಂದಿದ್ದು, ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಈ ಗೌರವವನ್ನು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಪ್ರಶಸ್ತಿಯನ್ನು ಪಡೆದರು. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು. ಇದನ್ನೂ ಓದಿ: `ಜೈಲರ್’ ರಜನಿಕಾಂತ್‌ಗೆ ಮೋಹನ್ ಲಾಲ್ ಸಾಥ್
Advertisement
Advertisement
ಈ ಪ್ರಶಸ್ತಿಗಾಗಿ ಘಟಾನುಘಟಿ ಹಾಡುಗಳೇ ಸ್ಪರ್ಧಾ ಕಣದಲ್ಲಿದ್ದವು. ಕೆರೊಲಿನ್, ಸಿಯೋ ಪಾ, ಹೋಲ್ಡ್ ಮೈ ಹ್ಯಾಂಡ್, ಲಿಫ್ಟ್ ಮಿ ಅಪ್ ರೀತಿಯ ಹಾಡುಗಳು ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಈ ಎಲ್ಲ ಹಾಡುಗಳ ಜನಪ್ರಿಯತೆಯನ್ನು ಹಿಂದಿಕ್ಕೆ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪಡೆದ ದಕ್ಷಿಣದ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k