ಬೆಂಗಳೂರು: ಸುವರ್ಣ ರಥ(ಗೋಲ್ಡನ್ ಚಾರಿಯಟ್) ಆದಾಯ ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೇ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ನಡುವೆ ಇದ್ದ ಗೊಂದಲ ಬಗೆಹರಿದಿದೆ.
ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೆಶಕರ ಮಾತುಕತೆ ಫಲವಾಗಿ ಇನ್ನು ಮುಂದೆ ಸುವರ್ಣ ರಥದ ಆದಾಯ ರೈಲ್ವೆ ಮಂಡಳಿಗೆ 56%, ಹಾಗೂ ಕೆಎಸ್‍ಟಿಡಿಗೆ 44% ರಷ್ಟು ಸಂದಾಯವಾಗಲಿದೆ. ಈ ಮಾತುಕತೆಯ ಫಲವಾಗಿ ವರ್ಷಕ್ಕೆ 10 ಬಾರಿ ಪ್ರವಾಸ ಕೈಗೊಳ್ಳುತ್ತಿದ್ದ ಗೋಲ್ಡನ್ ಚಾರಿಯಟ್, ಮುಂದಿನ ದಿನಗಳಲ್ಲಿ ಕನಿಷ್ಠ 20 ಬಾರಿ ಪ್ರಯಾಣಕ್ಕೆ ಅಣಿಯಾಗಬಹುದು ಅಂತ ಅಂದಾಜಿಸಲಾಗಿದೆ.
Advertisement
ಪ್ರಸ್ತುತ ಒಂದು ವಾರದ ಪ್ರಯಾಣ ಪ್ಯಾಕೇಜ್ ಹೊಂದಿರುವ ಗೋಲ್ಡನ್ ಚಾರಿಯಟ್, ಭವಿಷ್ಯದಲ್ಲಿ 2-3 ದಿನಗಳ ಪ್ರಯಾಣದ ವೇಳಾಪಟ್ಟಿ ಸಿದ್ಧಪಡಿಸಲು ಆಲೋಚಿಸಿದೆ. ಸ್ಥಳೀಯ ಪ್ರವಾಸಿಗರನ್ನು ಹಂಪಿ, ಬಾದಾಮಿ, ಮೈಸೂರು ಮಾರ್ಗಗಳಲ್ಲಿ ಕರೆದೊಯ್ಯಲು ಉದ್ದೇಶಿಸಿದೆ.