– ಬಿಜೆಪಿ – ಜೆಡಿಎಸ್‌ದು ಹಾಲು-ಜೇನಿನ ಸಂಬಂಧ
ರಾಮನಗರ: 2006ರಂತೆ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ನನ್ನು ಗೆಲ್ಲಿಸಿ ಎಂದು ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
Advertisement
ಈ ಬಗ್ಗೆ ರಾಮನಗರದಲ್ಲಿ (Ramanagara) ಮಾತನಾಡಿದ ಅವರು, 2006ರ ಆಡಳಿತ ಸುವರ್ಣಯುಗ ಆಗಿತ್ತು, ಆ ಸರ್ಕಾರದ ಆಡಳಿತವನ್ನು ಜನ ಈಗಲೂ ಸ್ಮರಿಸಿಕೊಳ್ಳುತ್ತಾರೆ. ರೈತರ ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸೈಕಲ್ ಭಾಗ್ಯ ಇನ್ನೂ ಅನೇಕ ಕಾರ್ಯಕ್ರಮವನ್ನು ತಂದೆವು. ನಾನು ಯಡಿಯೂರಪ್ಪಗೆ ಅಧಿಕಾರ ಕೊಡಬೇಕು ಇಂದಿದ್ದವನು. ಆದರೆ ಅದನ್ನು ತಪ್ಪಿಸುವ ಕೆಲ ಘಟನೆ ಆಯಿತು. ಯಡಿಯೂರಪ್ಪ ಆಗ ಸಿಎಂ ಆಗದ ತಪ್ಪು ನನ್ನ ಮೇಲೆ ಹಾಕಿಕೊಂಡು ಇಷ್ಟು ವರ್ಷ ನೋವು ಅನುಭವಿಸಿದ್ದೇನೆ. ಆಗ ನನ್ನ ಮನಸಲ್ಲಿ ಯಡಿಯೂರಪ್ಪಗೆ ಅಧಿಕಾರ ಕೊಡಬಾರದು ಎಂದು ಎಳ್ಳಷ್ಟೂ ಇರಲಿಲ್ಲ.ಅದೇ ರೀತಿಯ ಸುವರ್ಣ ಯುಗದ ಆಡಳಿತ ಮತ್ತೆ ಬರಲಿದೆ, ನಿಖಿಲ್‌ನ್ನು ಅದಕ್ಕಾಗಿ ಗೆಲ್ಲಿಸಿ ಕಳಿಸಿಕೊಡಿ ಎಂದು ಹೇಳಿದರು.
Advertisement
Advertisement
ಎರಡನೇ ಬಾರಿಗೆ ಬಿಜೆಪಿ (BJP) ಜೆಡಿಎಸ್ (JDS) ಹೊಂದಾಣಿಕೆ ಆಗಿದೆ. ಮುಂದೆ ನಾವಿಬ್ಬರೂ ಅಣ್ಣತಮ್ಮಂದಿರಂತೆ ಶಾಶ್ವತವಾಗಿ ಹೋಗುವ ಸಲುವಾಗಿ ಈ ಸಂಬಂಧ ಬೆಸೆದಿದ್ದೇವೆ. ನಮ್ಮ ವೈಯಕ್ತಿಕ ಹಿತಕ್ಕೆ ಅಲ್ಲ, ಜನರಿಗಾಗಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಒಂದಾಗಿದ್ದೇವೆ. ಕಾಂಗ್ರೆಸ್ ನಮ್ಮನ್ನ ಯಾವ ರೀತಿ ನಡೆದುಕೊಳ್ತೋ ಆಗ, ಯಡಿಯೂರಪ್ಪ 2006ರಲ್ಲಿ ಜತೆ ಸೇರಿ ಸರ್ಕಾರ ಮಾಡಿದ್ದೆವು. ಅವರು ಹಿರಿಯರಾಗಿದ್ದರು. 2006ರಲ್ಲಿ ಅವರೇ ಸಿಎಂ ಆಗಬಹುದಿತ್ತು, ಆದರೆ ನನಗೆ ಅವಕಾಶ ಮಾಡಿಕೊಟ್ಟರು. ನನ್ನನ್ನು ಜನ ಈಮಟ್ಟಕ್ಕೆ ಗುರುತಿಸಲು ರಾಮನಗರದ ಜನ, ಯಡಿಯೂರಪ್ಪ ಮತ್ತವರ ನಾಯಕರು ಕಾರಣ ಎಂದು ಸ್ಮರಿಸಿಕೊಂಡರು. ಇದನ್ನೂ ಓದಿ: Manipur | ಭದ್ರತಾ ಪಡೆಗಳೊಂದಿಗೆ ಭಾರಿ ಗುಂಡಿನ ಚಕಮಕಿ – 11 ಶಂಕಿತ ಕುಕಿ ಬಂಡುಕೋರರು ಬಲಿ!
Advertisement
ದೇವೇಗೌಡರ ಮೇಲೆ ಮೋದಿಯವರೇ ಸುಳ್ಳುಗಾರ ಎಂದು ಆರೋಪ ಮಾಡಿದ್ದರು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಮೋದಿಯವರು ದೇವೇಗೌಡರ ಮೇಲೆ ಅಪಾರ ಅಭಿಮಾನ ಇಟ್ಟಿದ್ದಾರೆ. ಹೌದು ದೇವೇಗೌಡರ ಬಗ್ಗೆ ಮೋದಿಯವರು ಹಾಗೆ ಟೀಕೆ ಮಾಡಿದ್ದರು. ಆದರೆ ದೇವೇಗೌಡರ ಕೆಲಸ ಸಾಧನೆಗಳನ್ನು ನೋಡಿ ಅವರ ಜೊತೆ ಮೋದಿ ಕೈಜೋಡಿಸಿದ್ದಾರೆ. ಕೇಂದ್ರದ ಮಂತ್ರಿಯಾದ ನನ್ನ ಮೇಲೆಯೇ ಎಫ್‌ಐಆರ್ ಹಾಕಿಸುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ನಿಮ್ಮ ಕಚೇರಿ ಸರ್ಚ್ ಮಾಡಬೇಕು ಅಂತ ರಾಜ್ಯಪಾಲರ ಕಚೇರಿಗೆ ಪತ್ರ ಬರೆದಿದ್ದರು. ಇದನ್ನು ನಾನು ಪ್ರಸ್ತಾಪ ಮಾಡಿದ್ದಕ್ಕೆ ಎಫ್‌ಐಆರ್ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಈ ಸರ್ಕಾರದ ಸಾಲ ಇನ್ನೂ ಜಾಸ್ತಿ ಆಗಲಿದೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಕೊಟ್ರಲ್ಲ, ಎಲ್ಲಿಂದ ಕೊಟ್ರಿ? ನೀವು ಈಗ ಸಾಲ ಮಾಡಿ ಹೋಗ್ತೀರಿ, ಅದು ಜನರ ಮೇಲೆ ಹೊರೆಯಾಗಿ ಬೀಳುತ್ತದೆ. ಇವರ ಅವಧಿಯಲ್ಲಿ ಅಭಿವೃದ್ಧಿ ಎಲ್ಲಿದೆ? ಜನ ಹೇಗೆ ಬದುಕಬೇಕು? ಜನರ, ರೈತರ ಕಷ್ಟ ಕೇಳುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಶಿಗ್ಗಾಂವಿ ʻಕೈʼ ಅಭ್ಯರ್ಥಿ ಯಾಸೀರ್ ಖಾನ್ ಮೇಲೆ ರೌಡಿಶೀಟರ್ ಕೇಸ್ ಇದೆ: ಎಸ್ಪಿ ಅಂಶುಕುಮಾರ್ ಆರೋಪ
ನಿಖಿಲ್ ಅಭ್ಯರ್ಥಿಯಾಗಿ ನಿಲ್ಲಲ್ಲ ಅಂತ ಕಣ್ಣೀರು ಹಾಕಿದ. ಪಕ್ಷದ ಮರ್ಯಾದೆ ಅಂತ ಬಿ ಫಾರಂ ಕೊಟ್ಟು ನಾವೇ ನಿಲ್ಲಿಸಿದ್ದೇವೆ. ಇಂದಿನಿಂದ ನಾನು ನಿಖಿಲ್‌ನನ್ನ ಚನ್ನಪಟ್ಟಣದ ಜನರ ಮಡಿಲಿಗೆ ಹಾಕಿದ್ದೇನೆ. ನಿಖಿಲ್ ಹೊರಗಿನ ಅಭ್ಯರ್ಥಿ ಅಂತಾರೆ, ಆದರೆ ಅದೆಲ್ಲೋ ಉತ್ತರ ಭಾರತದಲ್ಲಿ ಹುಟ್ಟಿದ ರಾಹುಲ್, ಪ್ರಿಯಾಂಕ ಕೇರಳಕ್ಕೆ ಬರುತ್ತಾರೆ. ನಾವು ಈ ನೆಲದ ಮಕ್ಕಳು, ನಿಖಿಲ್ ಈಮಣ್ಣಿನ ಮಗ. ನಾವು ಇಲ್ಲಿ ನಿಲ್ಲಲು ಇವರ ಅಪ್ಪಣೆ ಬೇಕಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎನ್ನುವವರು ಕೋರ್ಟ್‌ಗೆ ಬರಲಿ – ಶಾಶ್ವತ ಪಟಾಕಿ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಸುಪ್ರೀಂ
ಬಿಜೆಪಿ ಜೆಡಿಎಸ್ ನಡುವೆ ಹಾಲು ಜೇನಿನ ಸಂಬಂಧ ಇದೆ. ಇವತ್ತು ನಡ್ಡಾ ಅವರು ನಿಖಿಲ್ ಬಗ್ಗೆ ಚನ್ನಪಟ್ಟಣದ (Channapatna) ಜನಕ್ಕೆ ದೆಹಲಿಯಿಂದ ನಿಖಿಲ್ ಗೆಲ್ಲಿಸಿ ಅಂತ ನಡ್ಡಾ ಅವರು ಸಂದೇಶ ಕಳಿಸಿದ್ದಾರೆ. ನಿಖಿಲ್ ಭಾಷಣದಲ್ಲಿ ನಮ್ಮನ್ನೆಲ್ಲ ಓವರ್ ಟೇಕ್ ಮಾಡಿದ್ದಾನೆ. ದೇವರೇ ಅವನಿಗೆ ಅವಕಾಶ ಕೊಟ್ಟಿದ್ದಾನೆ. ಒಂದು ಅವಕಾಶ ನಿಖಿಲ್‌ಗೆ ಕೊಟ್ಟು ಗೆಲ್ಲಿಸಿ, ಚನ್ನಪಟ್ಟಣದ ಮನೆ ಮಗನಾಗಿ ಕೆಲಸ ಮಾಡ್ತಾನೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಕೂಪನ್ ಹಂಚೋದು, ಕಾರ್ಡ್ ಹಂಚೋದು ಮಾಡ್ತಿದ್ದಾರೆ. ಚನ್ನಪಟ್ಟಣದ ಜನ ಇವರ ಆಮಿಷಕ್ಕೆ ಬಲಿಯಾಗಲ್ಲ ಅನ್ನುವ ವಿಶ್ವಾಸ ನನಗಿದೆ ಎಂದರು. ಇದನ್ನೂ ಓದಿ: Bengaluru| ಬೈಕ್ ಡಿಕ್ಕಿ ಹೊಡೆದು 8ರ ಬಾಲಕ ಸಾವು