ಹಾಸನ: ಮನೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದು 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು (Robbery) ಮಾಡಿರುವ ಘಟನೆ ಹಾಸನ (Hassan) ನಗರದ ಗೌರಿಕೊಪ್ಪಲಿನಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದ ದೇವೇಗೌಡ ಎಂಬವರು ಗೌರಿಕೊಪ್ಪಲಿನ ಎಸ್‌ಬಿಐ ಬ್ಯಾಂಕ್ ಹತ್ತಿರವಿರುವ ಪ್ರಶಾಂತ್ ಎಂಬವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಇದ್ದರಿಂದ ಬಾಡಿಗೆ ಮನೆಗೆ ಬೀಗ ಹಾಕಿಕೊಂಡು ತಮ್ಮ ಸಂಸಾರದೊಂದಿಗೆ ಹರದನಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಮನೆಯಲ್ಲಿ ಸಿಸಿ ಕ್ಯಾಮೆರಾ ಇದ್ದುದ್ದರಿಂದ ಹೆಂಡತಿ ಮಕ್ಕಳ ಚಿನ್ನಾಭರಣವನ್ನು (Gold) ಮನೆಯ ಲಾಕರ್‌ನಲ್ಲಿ ಇಟ್ಟು ಬೀಗ ಹಾಕಿ ಹೋಗಿದ್ದರು. ಇದನ್ನೂ ಓದಿ: ಡೆತ್ ನೋಟ್ ಬರೆದಿಟ್ಟು ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
ಮೇ 7ರಂದು ಸಂಜೆ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಮುಂಬಾಲಿಗೆ ಅಳವಡಿಸಿದ್ದ ಕಬ್ಬಿಣದ ಸ್ಲೈಡಿಂಗ್ ಶೆಲ್ಟರ್‌ನ ಬೀಗ ತೆಗೆಯಲು ಹೋದಾಗ ಲಾಕ್ ಓಪನ್ ಆಗದೇ ಇದ್ದುದ್ದರಿಂದ ಸ್ವಲ್ಪ ತಳ್ಳಿದ್ದಾರೆ. ಬಾಗಿಲಿನ ಪಕ್ಕ ಇದ್ದ ಕಿಟಕಿಯ ಬಾಗಿಲು ತೆರೆದಿದ್ದು, ಅದರ ಮೂಲಕ ಕೈ ಹಾಕಿ ಲಾಕ್ ತೆರೆದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 4.24 ಕೋಟಿ ರೂ. ಮೌಲ್ಯದ ಚಿನ್ನ ವಶ
ಲಾಕರ್ ಮುರಿದು ಅದರೊಳಗಿದ್ದ 50 ಗ್ರಾಂನ ಮಾಂಗಲ್ಯ ಸರ, 14 ಗ್ರಾಂನ ಚಿನ್ನದ ಬ್ರೇಸ್‌ಲೇಟ್, 5 ಗ್ರಾಂನ ಮತ್ತೊಂದು ಬ್ರೇಸ್‌ಲೇಟ್, 47 ಗ್ರಾಂ ತೂಕದ 13 ಜೊತೆ ಚಿನ್ನದ ಓಲೆಗಳು, 11 ಗ್ರಾಂನ 4 ಉಂಗುರ, 10 ಗ್ರಾಂನ ಕೆಂಪು ಹರಳಿನ ಸರ, 2 ಗ್ರಾಂನ ಕೆಂಪು ಹರಳಿನ ಸರ, 15 ಗ್ರಾಂನ ಬಿಳಿ ನೆಕ್ಲೆಸ್, 8 ಗ್ರಾಂ ತೂಕದ ಕರಿಮಣಿ ಸರ, 7 ಗ್ರಾಂನ 2 ಚಿನ್ನದ ಪೆಂಡೆಂಟ್, 15 ಗ್ರಾಂನ ಚಿನ್ನದ ಸರ, 45 ಗ್ರಾಂನ 3 ಚಿನ್ನದ ಬಳೆಗಳು ಹಾಗೂ 5 ಗ್ರಾಂ ತೂಕದ ಹವಳದ ಸರ ಸೇರಿ ಒಟ್ಟು 234 ಗ್ರಾಂ ತೂಕದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಈ ಸಂಬಂಧ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಫ್ಲ್ಯಾಟ್‌ನ 10ನೇ ಮಹಡಿಯಿಂದ ಬಿದ್ದು ನೀಟ್ ವಿದ್ಯಾರ್ಥಿ ಸಾವು