ಗುವಾಹಟಿ: ಅಕ್ರಮವಾಗಿ 43 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣೂರಿನ ಮೂಲದ ಮೊಹಮ್ಮದ್ ಹ್ಯಾರಿಸ್ (51) ಬಂಧಿತ ಆರೋಪಿ. ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಮೊಹಮ್ಮದ್‍ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊಹಮ್ಮದ್ ಕಾಮ್ರಪ್ ಏಕ್ಸ್‌ಪ್ರೆಸ್ ರೈಲಿನ ಬೋಗಿ ಸಂಖ್ಯೆ ಬಿ-3ರ 11ನೇ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ರೈಲು ಇಂದು ಬೆಳಗ್ಗೆ 7.45 ಗಂಟೆಗೆ ಗುವಾಹಟಿ ರೈಲು ನಿಲ್ದಾಣದ ಪ್ಲ್ಯಾಟ್‍ಫಾರಂ ನಂಬರ್ 1ರಲ್ಲಿ ಬಂದು ನಿಂತಿತ್ತು. ತಕ್ಷಣವೇ ರೈಲು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Assam: Guwahati GRP recovered 8 gold biscuits, weighing 1.300 Kgs, valued at Rs 43 lakh, from a passenger onboard Kamrup Express, at Guwahati railway station, today. pic.twitter.com/GY8hje3grH
— ANI (@ANI) April 28, 2019
ಬಂಧಿತ ಮೊಹಮ್ಮದ್ ಬಳಿ 8 ಚಿನ್ನದ ಬಿಸ್ಕೆಟ್‍ಗಳು ಸಿಕ್ಕಿದ್ದು, ಅವುಗಳ ಒಟ್ಟು ತೂಕ 1.3 ಕೆಜಿ ಆಗಿದೆ. ಸುಮಾರು 43 ಲಕ್ಷ ರೂ. ಮೌಲ್ಯದ ಚಿನ್ನ ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಏಪ್ರಿಲ್ 13ರಂದು 12 ಚಿನ್ನದ ಬಿಸ್ಕೆಟ್‍ಗಳನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದರು. ಅದರ ಮೌಲ್ಯವು 60 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಅಷ್ಟೇ ಅಲ್ಲದೆ 2018 ಮಾರ್ಚ್ 23ರಲ್ಲಿ 12 ಚಿನ್ನದ ಬಿಸ್ಕೆಟ್, ಅದೇ ತಿಂಗಳ 15ರಂದು 1.5 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.