ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆದಾಯ ತೆರಿಗೆ ಗುಪ್ತಚರ ನಿರ್ದೇಶನಾಲಯವು(ಡಿಆರ್‍ಐ) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ನನ್ನು ವಶಪಡಿಸಿಕೊಂಡಿದೆ.
ಡಿಆರ್ ಐ ಅಧಿಕಾರಿಗಳು ನ್ಯೂ ಜಲ್‍ಪಾಲ್‍ಗುರಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಅನುಮಾನ ಮೇರೆಗೆ ಪರಿಶೀಲನೆ ನಡೆಸಿದಾಗ ಆತನ ಬಳಿ 56 ಚಿನ್ನದ ಬಿಸ್ಕತ್ ಪತ್ತೆಯಾಗಿದ್ದು, ಸುಮಾರು 9.2 ಕೆ.ಜಿ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಮಣಿಪುರದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಚಿನ್ನವನ್ನು ಮ್ಯಾನ್ಮಾರ್ ದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ವ್ಯಕ್ತಿ ಅಸ್ಸಾಂನ ಗುವಾಹಾಟಿಯಲ್ಲಿನ ಮಣಿಪುರಿ ವ್ಯಕ್ತಿಯಿಂದ ಚಿನ್ನದ ಬಿಸ್ಕತ್ ಗಳನ್ನು ಪಡೆದುಕೊಂಡಿದ್ದನು ಎಂದು ತನಿಖೆ ಸಂಸ್ಥೆ ತಿಳಿಸಿದೆ.
Advertisement
ಸದ್ಯಕ್ಕೆ ಡಿಆರ್‍ಐ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ. ಈತ ಪಶ್ಚಿಮ ಬಂಗಾಳದ ಹೂಗ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಈತ ಕಳ್ಳಸಾಗಾಣಿಕೆಯ ಚಿನ್ನದ ಬಿಸ್ಕತ್ ಗಳನ್ನು ತನ್ನ ಸೊಂಟದ ಸುತ್ತಲೂ ವಿಶೇಷವಾದ ಬಟ್ಟೆಯಿಂದ ತಯಾರಿಸಿದ್ದ ಬೆಲ್ಟ್ ನಲ್ಲಿ ಮತ್ತು ಸ್ಪೋರ್ಟ್ಸ್ ಶೂಗಳ ಒಳಭಾಗದಲ್ಲಿ ಅಡಗಿಸಿಕೊಂಡಿದ್ದನು ಎಂದು ಡಿಆರ್ ಐ ಹೇಳಿಕೆ ನೀಡಿದೆ.
Advertisement
West Bengal: The officers of Directorate of Revenue Intelligence (DRI), Siliguri Regional Unit, arrested a passenger from New Jalpaiguri Railway Station, Siliguri yesterday & seized 9.296 kgs of gold biscuits worth Rs. 3,00,08,417, from his possession. pic.twitter.com/eMCo9NVAkK
— ANI (@ANI) November 18, 2018
ಸದ್ಯಕ್ಕೆ ಡಿಆರ್‍ಐಯೂ ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆತನಿಂದ ವಿದೇಶಿ ಮೂಲದ 9.296 ಕೆಜಿ ಚಿನ್ನದ ಬಿಸ್ಕತ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 3.08 ಕೋಟಿ ರೂ. ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews