ಲಂಡನ್: ಬ್ರಿಟನ್‍ನ ಬ್ಲೆನ್‍ಹೈಮ್ ಅರಮನೆಯಿಂದ ಚಿನ್ನದ ಶೌಚಾಲಯದ ಕಮೋಡ್ ಅನ್ನು ಕಳ್ಳರು ಎಗರಿಸಿದ್ದು, ವಿಶ್ವಕ್ಕೆ ಅಚ್ಚರಿ ಮೂಡಿಸಿದೆ.
ಬ್ಲೆನ್‍ಹೈಮ್ ಅರಮನೆಯಲ್ಲಿ ಗುರುವಾರ ನಡೆದಿದ್ದ ಪ್ರದರ್ಶನದ ವೇಳೆ 18 ಕ್ಯಾರೆಟ್‍ಗಳ ಚಿನ್ನದಿಂದ ಮಾಡಿದ ಕಮೋಡ್ ಕೂಡ ಇಡಲಾಗಿತ್ತು. ಈ ಶೌಚಾಲಯದ ಕಮೋಡ್ ಮೌಲ್ಯವು 12.78 ಕೋಟಿ ರೂ. (1.8 ದಶಲಕ್ಷ ಡಾಲರ್) ಆಗಿದೆ. ಪ್ರದರ್ಶನಲ್ಲಿ ಕಳ್ಳರು ಕೈಚಳಕ ತೋರಿಸಿ ಕದ್ದಿದ್ದಾರೆ.
Advertisement
ಇಟಾಲಿಯನ್ ಕಲಾವಿದ ಮೌರಿಜಿಯಾ ಕೆಟಲಾನ್ ಈ ಕಮೋಡ್ ತಯಾರಿಸಿದ್ದರು. ಇದಕ್ಕೆ ಅಮೆರಿಕ ಎಂದು ಹೆಸರು ಇಡಲಾಗಿತ್ತು. ಇದನ್ನು ಈ ಹಿಂದೆ ನ್ಯೂಯಾರ್ಕ್ ನ ಗೆಗನ್ ಹೈಮ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಅಷ್ಟೇ ಅಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಒಂದು ದಿನದ ಮಟ್ಟಿಗೆ ಬಾಡಿಗೆ ನೀಡಲಾಗಿತ್ತು.
Advertisement
Advertisement
ಬ್ರಿಟನ್‍ನ ಬ್ಲೆನ್‍ಹೈಮ್ ಅರಮನೆಯಲ್ಲಿ ಗುರುವಾರ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ಚಿನ್ನದ ಕಮೋಡ್ ಕೂಡ ಇಡಲಾಗಿತ್ತು. ಅರಮನೆಗೆ ಬಂದಿದ್ದ ಖದೀಮರು ಶೌಚಾಲಯ ಕಿತ್ತುಕೊಂಡು ಹೋಗಿದ್ದಾರೆ. ಗುರುವಾರ ಘಟನೆ ನಡೆದಿದ್ದರೂ ಶನಿವಾರ ನಮ್ಮ ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ಸಂಬಂಧ ಥೇಮ್ಸ್ ವ್ಯಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಸಂಬಂಧ 66 ವರ್ಷದ ಓರ್ವನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.