ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೆಣದ ಕಿವಿಯೋಲೆ ಮಾಯವಾಗಿದ್ದು, ಸತ್ತವರನ್ನೂ ಆಸ್ಪತ್ರೆ ಸಿಬ್ಬಂದಿ ಬಿಡಲ್ವಾ ಅನ್ನೋ ಪ್ರಶ್ನೆ ಎದ್ದಿದೆ.
ಹೌದು. ತ್ರಿವೇಣಿ ರೋಡ್ ನಲ್ಲಿ ವಾಸವಿರುವ ರುಕ್ಮಿಣಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅಲ್ಲಿ ಹೋದಾಗ ರುಕ್ಮಿಣಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್
Advertisement
Advertisement
ಅದಾದ ಬಳಿಕ ರುಕ್ಮಿಣಿಯನ್ನು ಎಮರ್ಜೆನ್ಸಿಗೆ ವೈದ್ಯರು ಕರೆದುಕೊಂಡು ಹೋದರು. ನಂತರ ಅಂಬುಲೆನ್ಸ್ ಗೆ ಶಿಫ್ಟ್ ಮಾಡಲು ಹೇಳಿದರು. ಅಂತೆಯೇ ಶಿಫ್ಟ್ ವೇಳೆ ಕಿವಿ ಹರಿದಂತೆ ಕಂಡಿದ್ದು, ರಕ್ತ ಸುರಿಯುತ್ತಿತ್ತು. ಅಲ್ಲದೆ ಕಿವಿಯೋಲೆ ಇಲ್ಲವಾಗಿತ್ತು. ಕೂಡಲೇ ಅನುಮಾನಗೊಂಡ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕೆಲಕಾಲ ವಾಗ್ವಾದ ನಡೆದ ಬಳಿಕ ಸೆಕ್ಯೂರಿಟಿ ಸಿಬ್ಬಂದಿ ಕಿವಿಯೋಲೆ ತಂದು ಕೊಟ್ಟ ಪ್ರಸಂಗ ನಡೆದಿದೆ.
Advertisement
Advertisement
ರುಕ್ಮಿಣಿ ಮಗಳು ಕವಿತಾ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿ, ಕಿವಿಯೋಲೆಯಲ್ಲೂ ಪೂರ್ತಿ ಕೊಟ್ಟಿಲ್ಲ. ಅಲ್ಲದೆ ನಾಲ್ಕು ತಾಳಿಯ ಮಾಂಗಲ್ಯ ಸರ ಕೂಡ ನಾಪತ್ತೆಯಾಗಿದೆ. ಸತ್ತ ಹೆಣನಾ ಹೀಗೆ ಕುಯ್ದು ಚಿನ್ನ ಎತ್ತಿಕೊಳ್ತಾರೆ ಅಂದ್ರೆ ಆಸ್ಪತ್ರೆಯವರನ್ನು ಹೇಳೋರು ಕೇಳೋರು ಯಾರು ಇಲ್ವಾ..?, ನಾವು ಕಳೆದುಕೊಂಡ ನೋವಲ್ಲಿ ಇರುತ್ತೇವೆ. ಅಂಥದ್ದರಲ್ಲಿ ಈ ರೀತಿಯ ವರ್ತನೆ ನಿಜಕ್ಕೂ ಕಣ್ಣೀರು ಬಂತು. ಕಿವಿಯನ್ನು ರಕ್ತ ಬರೋ ತರ ಎಳೆದು ಓಲೆ ಕಿತ್ತುಕೊಂಡಿದ್ದಾರೆ. ನಾವು ಸ್ಟೇಷನ್ ಗೆ ದೂರು ಕೊಡ್ತೀವಿ ಎಂದು ಕಣ್ಣೀರಾಕಿದ್ದಾರೆ.