ಬಿಗ್ ಬಾಸ್ಗೆ (Bigg Boss Kannada 11) ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೇ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ಗೆ ಅವಮಾನಿಸಿದ್ದಾರೆ. ಅದಕ್ಕೆ ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ ಬಾಸ್ ಬಳಿ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.
Advertisement
ಇಂದಿನ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ‘ಬಿಗ್ ಬಾಸ್’ ಆಟದ ನಿಯಮದಲ್ಲಿತ್ತು. ಈ ಟಾಸ್ಕ್ನಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಬಿಗ್ ಫೈಟ್ ನಡೆದಿದೆ. ಇದನ್ನೂ ಓದಿ:ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್
Advertisement
Advertisement
ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ, ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು (Ugramm Manju) ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ವಾದಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್ಗೆ ಬಳಸಿದ್ದಾರೆ. ಗುಗ್ಗು ನನ್ನ ಮಗ, ವೇಸ್ಟ್ ನನ್ನ ಮಗ ಎಂಬ ಪದಗಳನ್ನು ರಜತ್ ಬಳಸಿ ಸುರೇಶ್ಗೆ ಕೌಂಟರ್ ಕೊಟ್ಟಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ನಿಂದಿಸಿರುವ ರೀತಿ ನನಗೆ ಬೇಸರ ಆಗಿದೆ. ಬಿಗ್ ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಟ ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಸುರೇಶ್ಗೆ ಶಿಶಿರ್, ಮೋಕ್ಷಿತಾ ಅದೆಷ್ಟೇ ಸಮಾಧಾನ ಮಾಡಿದರು ಕೇಳೋ ಪರಿಸ್ಥತಿಯಲ್ಲಿ ಅವರಿಲ್ಲ.
Advertisement
View this post on Instagram
ಈ ಪ್ರೋಮೋ ನೋಡಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಪಿಸೋಡ್ಗಾಗಿ ಅಭಿಮಾನಿಗಳು ಎದುರು ನೋಡಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ.