ಬೆಂಗಳೂರು: ರನ್ಯಾ ರಾವ್‌ಗೆ (Ranya Rao) ಪ್ರೋಟೋಕಾಲ್ ನೀಡುವಂತೆ ರಾಮಚಂದ್ರ ರಾವ್ (Ramachandra Rao) ಸೂಚನೆ ನೀಡಿದ್ದರು ಎಂದು ಶಿಷ್ಟಾಚಾರ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ತನಿಖೆಯಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ.
ಡಿಜಿಪಿ ರಾಮಚಂದ್ರರಾವ್ ರನ್ಯಾ ರಾವ್‌ಗೆ ಪ್ರೋಟೋಕಾಲ್ ನೀಡುವಂತೆ ಹೇಳಿದ್ದರು. ವಿಮಾನ ನಿಲ್ದಾಣದಲ್ಲಿ (Air Port) ಗ್ರೀನ್‌ಚಾನಲ್ ವ್ಯವಸ್ಥೆ ಮಾಡಲು ಸೂಚಿಸಿದ್ದರು ಎಂದು ಪ್ರೋಟೋಕಾಲ್ ಆಫೀಸರ್ ಹೇಳಿರುವುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ
ರಾಮಚಂದ್ರರಾವ್ ಸೂಚನೆಯಂತೆ ಪ್ರತಿಬಾರಿ ರನ್ಯಾರಾವ್‌ಗೆ ಪ್ರೋಟೋಕಾಲ್ ವ್ಯವಸ್ಥೆ ಮಾಡಲಾಗುತ್ತಿತ್ತು. ಮಾರ್ಚ್ 03ರಂದು ರನ್ಯಾರಾವ್ ನನಗೆ ಕರೆ ಮಾಡಿ ದುಬೈನಿಂದ ಸಂಜೆ 6:30ಕ್ಕೆ ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ತಿಳಿಸಿದ್ದರು. ಆಕೆ ಬೆಂಗಳೂರಿಗೆ ಬಂದಾಗ ನಾನು ಗ್ರೀನ್‌ಚಾನೆಲ್ ವ್ಯವಸ್ಥೆ ಮಾಡಿದ್ದೆ. ರನ್ಯಾರಾವ್ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವಿಚಾರ ನನಗೆ ಗೊತ್ತಿರಲಿಲ್ಲ.
ಶಿಷ್ಟಾಚಾರ ದುರ್ಬಳಕೆ ಪ್ರಕರಣ ಈಗ ರನ್ಯಾ ಮಲತಂದೆ ಬುಡಕ್ಕೆ ಬರುವಂತೆ ಕಾಣುತ್ತಿದೆ. ಹೀಗಾಗಿ ಐಪಿಎಸ್ ರಾಮಚಂದ್ರ ರಾವ್ ಅವರನ್ನು ಸುದೀರ್ಘ ಅವಧಿಗೆ ಕಡ್ಡಾಯ ರಜೆ ಮೇಲೆ ಕಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ಶಿಷ್ಟಾಚಾರ ದುರ್ಬಳಕೆ ಆರೋಪ ಪ್ರಕರಣದಲ್ಲಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಎಸಿಎಸ್ ಗೌರವ್ ಗುಪ್ತಾಗೆ ನೆರವಾಗಲು ಸಿಐಡಿ ಡಿಐಜಿ ವಂಶಿಕೃಷ್ಣರನ್ನು ಸರ್ಕಾರ ನೇಮಕ ಮಾಡಿದೆ.