ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಸಿಲುಕಿರುವ ನಟಿ ರನ್ಯಾ (Ranya Rao) ಬೇಲ್ ಆದೇಶವನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮಾ.14ಕ್ಕೆ ಕಾಯ್ದಿರಿಸಿದೆ.
ರನ್ಯಾ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ಫೋಟಕ ವಿಚಾರಗಳು ಬಯಲಿಗೆ ಬರುತ್ತಿವೆ. ಕಳೆದ ವರ್ಷದ ಕೊನೆಯಲ್ಲಿ 2 ಬಾರಿ ದುಬೈನಲ್ಲಿ ಚಿನ್ನ ಖರೀದಿ ಮಾಡಿದ್ದ ರನ್ಯಾ ರಾವ್, ಅದನ್ನು ಸ್ವಿಟ್ಜರ್‌ಲೆಂಡ್‌ಗೆ ಕೊಂಡೊಯ್ಯೋದಾಗಿ ಅಲ್ಲಿನ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿದ್ದರು. ಜಿನೇವಾಗೆ ಹೋಗೋದಾಗಿ ಸುಳ್ಳು ಹೇಳಿದ್ದ ರನ್ಯಾ ರಾವ್ ನೇರವಾಗಿ ಭಾರತಕ್ಕೆ ಬಂದಿದ್ದರು ಎಂಬುದು ಆಕೆಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಗೊತ್ತಾಗಿದೆ ಎಂದು ಡಿಆರ್‌ಐ, ಅರೆಸ್ಟ್ ಮೆಮೋದಲ್ಲಿ ತಿಳಿಸಿದೆ. ರನ್ಯಾರಾವ್ ನಿರಂತರವಾಗಿ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಕಿಂಗ್‌ಪಿನ್ ಆಗಿರುವ ಈಕೆ ಆರು ತಿಂಗಳು ದೇಶದಿಂದ ಹೊರಗೆ ಇರುತ್ತಿದ್ದರು ಎಂದಿದೆ. ಇದನ್ನೂ ಓದಿ: ಮನೆಯ ಬಾಗಿಲಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ – ಬೇಸತ್ತು ಮಹಿಳೆ ಆತ್ಮಹತ್ಯೆ
ರನ್ಯಾ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ಎಲ್ಲಾ ಅಂಶಗಳು ಪ್ರಸ್ತಾಪವಾಯಿತು. ರನ್ಯಾರಾವ್ ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ. ನಿದ್ದೆ ಮಾಡೋಕೂ ಬಿಡದೇ ವಿಚಾರಣೆ ನಡೆಸಿದ್ದಾರೆ. ನಿದ್ದೆಯ ಹಕ್ಕನ್ನು ಕಿತ್ತಕೊಂಡಿದ್ದಾರೆ ಎಂದು ರನ್ಯಾ ಪರ ವಕೀಲರು ವಾದ ಮಂಡಿಸಿದರು. ರನ್ಯಾ ಮದುವೆಯಾದ ಮಹಿಳೆ. ಅವರೆಲ್ಲೂ ಹೋಗಲ್ಲ. ಜಾಮೀನು ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ತಂದೆ-ತಾಯಿ ಹಾಗೂ ಹಿರಿಯರ ಆರೈಕೆ ಮಾಡದಿದ್ರೆ ಅವ್ರ ಆಸ್ತಿಯಲ್ಲಿ ಪಾಲಿಲ್ಲ: ಕೃಷ್ಣ ಬೈರೇಗೌಡ
ಆದರೆ ಇದನ್ನು ಡಿಆರ್‌ಐ ಪರ ವಕೀಲರು ಆಕ್ಷೇಪಿಸಿದರು. ರನ್ಯಾಗೆ ಕರೆ ಮಾಡಿದ್ದ ವ್ಯಕ್ತಿಗೆ ಸಮನ್ಸ್ ನೀಡಿ ಹೇಳಿಕೆ ಪಡೆಯಲಾಗಿದೆ. ಯಾವುದೇ ಲೋಪ ಎಸಗಿಲ್ಲ. ಆಕೆ ಬಳಿ ಯುಎಇ ರೆಸಿಡೆನ್ಸಿ ಕಾರ್ಡ್ ಸಿಕ್ಕಿದೆ. ಹೀಗಾಗಿ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಮಾರ್ಚ್ 14ಕ್ಕೆ ಆದೇಶ ಕಾಯ್ದಿರಿಸಿತು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಒಂದೇ ಒಂದು ಮನೆ ಕೊಟ್ಟಿದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ: ಜಮೀರ್ ಸವಾಲ್