ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿ ನಟಿ ರನ್ಯಾ ರಾವ್ (Ranya Rao) ತಮ್ಮ ಸಹೋದರನ ಮದುವೆಯಲ್ಲಿ ಮಿಂಚಿದ್ದ ದೃಶ್ಯಗಳು `ಪಬ್ಲಿಕ್ ಟಿವಿ’ಗೆ ಲಭ್ಯವಾಗಿವೆ.
ಹೌದು, ಇತ್ತೀಚಿಗಷ್ಟೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾ ರಾವ್‌ನ್ನು ಬಂಧಿಸಿ, 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ:ರನ್ಯಾ ಭೇಟಿಗೆ ಅವಕಾಶ ನೀಡ್ತಿರಲಿಲ್ಲ, ಅಂತರ ಬೆಳೆದಿತ್ತು – ಕೇಸ್‌ನಿಂದ ಕುಟುಂಬಕ್ಕೆ ಕಳಂಕ: ರಾಮಚಂದ್ರ ರಾವ್
ರನ್ಯಾ ರಾವ್ ಬಂಧನದ ಬಳಿಕ ಆಕೆಯ ಮಲತಂದೆ ಕೆ.ರಾಮಚಂದ್ರರಾವ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ನನ್ನ ಮಗಳು ದೂರ ಆಗಿ 4 ತಿಂಗಳು ಕಳೆದಿದೆ. 2025ರಲ್ಲಿ ರನ್ಯಾ, ಜತಿನ್ ವಿವಾಹವಾಗಿತ್ತು. ಅವಳ ಸಂಸಾರದ ವಿಚಾರಕ್ಕೆ ನಾನು ಹೋಗೋದಿಲ್ಲ. ಮದುವೆಯಾದ ಬಳಿಕ ಅವರಿಬ್ಬರು ಸಂಪೂರ್ಣ ಸ್ವಾತಂತ್ರ್ಯ, ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು. ಜೊತೆಗೆ ನಮ್ಮ ಮನೆಗೆ ಭೇಟಿ ನೀಡುವುದನ್ನು ನಿಲ್ಲಿಸಿದ್ದರು. ಇತ್ತೀಚಿಗೆ ನನ್ನ ಮಗಳು ತುಂಬಾ ದಿನದಿಂದ ಕಾಂಟಾಕ್ಟ್ ಇಲ್ಲ ಎಂದು ಹೇಳಿದ್ದರು. ಈ ರೀತಿ ಬರೆದು ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದರು.
ಫೆಬ್ರವರಿಯಲ್ಲಿ ನಡೆದಿದ್ದ ಸೌಂದರ್ಯ ಜಯಮಾಲಾ ಹಾಗೂ ರುಷಬ್ ಮದುವೆಯಲ್ಲಿ ನಟಿ ರನ್ಯಾ ಮಿಂಚಿದ್ದರು. ಸಹೋದರನ ಮದುವೆಯಲ್ಲಿ ಆಕೆಯ ತಾಯಿ ರೋಹಿಣಿ ಜೊತೆ ಕಳಸ ಹಿಡಿದುಕೊಂಡು ಓಡಾಡಿದ್ದರು. ತಿಂಗಳ ಹಿಂದೆಯಷ್ಟೇ ತಮ್ಮ ಕುಟುಂಬದವರೊಂದಿಗೆ ರನ್ಯಾ ಖುಷಿಯಾಗಿದ್ದರು. ಆದರೆ ರಾಮಚಂದ್ರರಾವ್ ನನ್ನ ಮಗಳು ದೂರವಾಗಿ 4 ತಿಂಗಳು ಕಳೆದಿವೆ ಎಂದು ಹೇಳಿದ್ದರು. ಸದ್ಯ ರಾಮಚಂದ್ರರಾವ್ ಅವರು ರನ್ಯಾ ರಾವ್ ಬಗ್ಗೆ ಸುಳ್ಳು ಹೇಳಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.
ಪ್ರಕರಣ ಏನು?
ಮೂಲತಃ ಚಿಕ್ಕಮಗಳೂರಿನವರಾದ ಎಡಿಜಿಪಿ ರಾಮ್‌ಚಂದ್ರರಾವ್ ಅವರ 2ನೇ ಪತ್ನಿಯ ಮೊದಲ ಗಂಡನ ಮಗಳು ರನ್ಯಾ ರಾವ್. ಮಾ.04 ರಂದು ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾ ರಾವ್‌ನ್ನು ಬಂಧಿಸಿ, 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ವಶಕ್ಕೆ ಪಡೆದಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ನಟಿಗೆ 14.2 ಕೆಜಿ ಚಿನ್ನ ದುಬೈನಲ್ಲಿ ಸಿಕ್ಕಿದ್ದು ಹೇಗೆ? – ರನ್ಯಾಗೆ DRIಯಿಂದ ಡ್ರಿಲ್