ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಯುದ್ಧದ ಘೋಷಣೆ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಚಿನ್ನ, ಬೆಳ್ಳಿಯ ಬೆಲೆಗಳು ಗಗನಕ್ಕೆ ಏರಿವೆ.
2,000ಕ್ಕೂ ಅಧಿಕ ಪಾಯಿಂಟ್ಸ್ ಸೆನ್ಸೆಕ್ಸ್ ಕುಸಿತ ಕಂಡರೆ ನಿಫ್ಟಿ 600 ಪಾಯಿಂಟ್ಸ್ ಕುಸಿದಿದೆ. ಯುದ್ಧ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದು, ಪ್ರತಿ ಬ್ಯಾರಲ್ ಬೆಲೆ 100 ಡಾಲರ್ ಮೀರಿದೆ. ಈ ಹಿಂದೆ ಪ್ರತಿ ಬ್ಯಾರಲ್ ಬೆಲೆಯೂ 60-70 ಡಾಲರ್ ಆಸುಪಾಲಿನಲ್ಲಿತ್ತು. ನವೆಂಬರ್ 4ರಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯವಾಗಿದೆ.
Advertisement
Advertisement
ಚಿನ್ನದ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು 24 ಕ್ಯಾರೆಟ್‍ನ 10 ಗ್ರಾಂ ಚಿನ್ನಕ್ಕೆ 5,320ರೂ. ಹಾಗೂ 22 ಕ್ಯಾರೆಟ್‍ನ 10 ಗ್ರಾಂ ಬಂಗಾರಕ್ಕೆ 4,750 ರೂಪಾಯಿಯಾಗಿದೆ. ನಿನ್ನೆಗಿಂತ ಇಂದು ಒಂದು ಗ್ರಾಂಗೆ 150 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನಕ್ಕೆ 1,500 ರೂ. ಹೆಚ್ಚಳವಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್
Advertisement
Advertisement
ಜೊತೆಗೆ ಒಂದು ಕೆಜಿ ಬೆಳ್ಳಿಗೆ 68,400 ರೂಪಾಯಿ ಹೆಚ್ಚಳವಾಗಿದೆ. ನಿನ್ನೆಗಿಂತ ಇಂದು ಬೆಳ್ಳಿ ಬೆಲೆಯಲ್ಲಿ 2,200 ರೂ ಏರಿಕೆಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರೋ ಯುದ್ಧದಿಂದಾಗಿ ಚಿನ್ನ ಹಾಗೂ ಬೆಳ್ಳಿ ಏರಿಕೆಯಾಗಿದೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ
ಯುದ್ಧದ ಭೀತಿಯಿಂದಾಗಿ ಈಗಾಗಲೇ ಉಕ್ರೇನ್‍ನಿಂದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳು ವಾಪಸ್ಸಾಗಿದ್ದಾರೆ. ವಿಶೇಷ ವಿಮಾನದ ಮೂಲಕ ಭಾರತೀಯರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ. ಭಾರತೀಯ ಪ್ರಜೆಗಳು ದೆಹಲಿಯ ಅಂತರಾಷ್ಟ್ರೀಯ ವಿಮಾನಯಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.