– ಮಂಗ್ಳೂರು ಏರ್‌ಪೋರ್ಟಿನಲ್ಲಿ ಇಬ್ಬರ ಅರೆಸ್ಟ್
ಮಂಗಳೂರು: ವಿದೇಶದಿಂದ ಆಗಮಿಸಿದ ಇಬ್ಬರು ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೇರಳದ ಮಲ್ಲಾಪುರಂನ ನಿವಾಸಿ ಮಹಮ್ಮದ್ ಸ್ವಾಲಿಹ್ ಮತ್ತು ಮೊಹಮ್ಮದ್ ನಿಶಾದ್ ಬಂಧಿತ ಆರೋಪಿಗಳು. ಇಬ್ಬರು ಬೇರೆ ಬೇರೆ ವಿಮಾನದಲ್ಲಿ ಆಗಮಿಸಿದ್ದು, ಬರೋಬ್ಬರಿ 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಸ್ವಾಲಿಹ್ ದುಬೈನಿಂದ ಸ್ಪೈಸ್ ಜೆಟ್‍ನಲ್ಲಿ ಆಗಮಿಸಿದ್ದನು. ನಿಶಾದ್ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದನು. ಇಬ್ಬರನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯಕ್ಕೆ ಆರೋಪಿಗಳನ್ನು ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇಬ್ಬರ ಬಳಿ ಸುಮಾರು 58.95 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.