ಬೆಂಗಳೂರು: ಇಂದು ವೈಕುಂಠ ಏಕಾದಶಿ. ಸ್ವರ್ಗದ ಬಾಗಿಲು ತೆರೆಯೋ ಪುಣ್ಯದಿನ. ಈ ಶುಭ ಘಳಿಗೆಯಲ್ಲಿ ಬಂಗಾರ ಕೊಂಡುಕೊಳ್ಳಬೇಕು ಅನ್ನುವವರಿಗೆ ಗೋಲ್ಡ್ ಶಾಕ್ ಕೊಟ್ಟಿದೆ.
ಹೌದು. ಹೊಸ ವರ್ಷದಿಂದ ದಿನದಿಂದ ದಿನಕ್ಕೆ ಚಿನ್ನ ಕಹಿಯಾಗುತ್ತಲೇ ಇದೆ. ಇದೇ ತಿಂಗಳ 3ರಂದು 10 ಗ್ರಾಂ ಬಂಗಾರದಲ್ಲಿ 2 ಸಾವಿರದಷ್ಟು ಹೆಚ್ಚಾಗಿತ್ತು. ವೈಕುಂಠ ಏಕಾದಶಿ ದಿನವಾದ ಇಂದು ಬೆಳಗ್ಗೆ 10 ಗ್ರಾಂ ಚಿನ್ನದಲ್ಲಿ 700 ರೂ. ಹೆಚ್ಚಾಗಿದೆ. ಇದು ಗೋಲ್ಡ್ ಲವರ್ಸ್ ಗೆ ಬಿಗ್ ಶಾಕಿಂಗ್ ನ್ಯೂಸ್ ಆಗಿದೆ.
Advertisement
Advertisement
ಚಿನ್ನಿವಾರ ಪೇಟೆಯಲ್ಲಿ ನಿನ್ನೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 37,690ರೂ. ಆಗಿದ್ದರೆ, ಇಂದು 38,390 ರೂ.ಗೆ ಏರಿಕೆಯಾಗಿದೆ. ಅಂದರೆ ಒಂದೇ ದಿನ 700 ರೂ. ಹೆಚ್ಚಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಬಂಗಾರಕ್ಕೆ ನಿನ್ನೆ 41,490 ರೂ. ಇತ್ತು. ಆದರೆ ಇಂದು 42,190 ರೂ.ಗೆ ಹೆಚ್ಚಾಗಿದೆ ಅಂದರೆ ಇಲ್ಲಿಯೂ ಸಹ 700 ರೂ ಏರಿದೆ. ಇದೊಂದು ಸಾರ್ವತ್ರಿಕ ದಾಖಲೆಯಾಗಿದೆ. ಇದು ಚಿನ್ನ ಪ್ರಿಯರಿಗೆ ಸ್ಯಾಡ್ ನ್ಯೂಸ್ ಆಗಿದೆ.
Advertisement
ಬೆಲೆ ಹೆಚ್ಚಳಕ್ಕೆ ಕಾರಣಗಳೇನು?
* ಅಮೆರಿಕ ಹಾಗೂ ಇರಾನ್ ನಡುವೆ ಏರ್ಪಿಟ್ಟಿರೋ ಸಂಘರ್ಷ.
* ಹೂಡಿಕೆದಾರರು ಚಿನ್ನದ ಹೂಡಿಕೆಗೆ ಹೆಚ್ಚು ಒಲವು ತೋರಿಸುತ್ತಿರುವುದು.
* ಡಾಲರ್ ಎದುರು ರೂಪಾಯಿ ಮೌಲ್ಯ 72 ರೂಗೆ ಕುಸಿತ ಕಂಡಿರುವುದು ಚಿನ್ನದ ದರದಲ್ಲಿ ಏರಿಕೆಯಾಗಲು ಕಾರಣವಾಗಿದೆ.
Advertisement
ವೈಕುಂಠ ಏಕಾದಶಿಯಂದು ಚಿನ್ನ ಕೊಳ್ಳಬೇಕು ಎನ್ನುವವರು ರೇಟ್ ಕೇಳಿ, ಬೇಡಪ್ಪಾ ಬೇಡ ಚಿನ್ನದ ಸಹವಾಸವೆನ್ನುತ್ತಿದ್ದಾರೆ. ಹಳದಿ ಲೋಹದ ದರ ಹೆಚ್ಚಳಕ್ಕೆ ಸಾರ್ವಜನಿಕರು ಕೂಡ ಫುಲ್ ಗರಂ ಆಗಿದ್ದಾರೆ.