ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

Public TV
1 Min Read
GOLD RATE

ಬೆಂಗಳೂರು: ಚಿನ್ನ ಅಂದ್ರೇ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮುಂದಿನ ತಿಂಗಳು ಮದುವೆ ಸೀಜನ್ ಆರಂಭವಾಗಿದ್ದು, ಸಾಕಷ್ಟು ಮದುವೆ, ಶುಭ ಸಮಾರಂಭಗಳು ನಡೆತ್ತವೆ. ಈ ಟೈಮ್ ನಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದ್ದು, ಎಲ್ಲಾ ರೆರ್ಕಾಡ್‍ಗಳನ್ನ ಬ್ರೇಕ್ ಮಾಡಿದೆ.

ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಭಾನುವಾರ ಬಂಗಾರದ ರೇಟ್ (Gold & Silver Rate) ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.

GOLD RATE 1

ನಿನ್ನೆ ಚಿನ್ನ, ಬೆಳ್ಳಿಯ ರೇಟ್ ಎಷ್ಟಿತ್ತು?
* 24 ಕ್ಯಾರೆಟ್ 10 ಗ್ರಾಂ ಚಿನ್ನ- 67,800 ರೂ.
* 22 ಕ್ಯಾರೆಟ್ 10 ಗ್ರಾಂ ಚಿನ್ನ- 61,100 ರೂ.
* 1 ಕೆ.ಜಿ ಬೆಳ್ಳಿ- 75,000 ರೂ.

ಇದೊಂದು ಆಲ್ ಟೈಮ್ ಹೈಯೆಸ್ಟ್ ರೆರ್ಕಾಡ್ ಆಗಿದೆ. ಬಂಗಾರ ಯಾವತ್ತೂ ಈ ರೇಟ್‍ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿನಿಂದ ಮದುವೆ ಸೀಜನ್ ಇದ್ದು, ಅಕ್ಷಯ ತೃತೀಯಕ್ಕೂ ಚಿನ್ನಕ್ಕೆ ಡಿಮ್ಯಾಂಡ್ ಇರೋದ್ರಿಂದ ಈ ರೇಟ್ ಇದೇ ತರಹ ಮುಂದುವರಿಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳುತ್ತಾರೆ.

ದರ ಏರಿಕೆಗೆ ಕಾರಣಗಳೇನು?: ಅಮೆರಿಕದ ಡಾಲರ್ ದುರ್ಬಲವಾಗಿರೋದು. ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಗಾರದ ಮೇಲೆ ಇನ್ವೆಸ್ಟ್ ಮಾಡ್ತಾ ಇರೋದು ಚಿನ್ನದ ಪೂರೈಕೆಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ

GOLD RATE 2

ಶುಭ ಸಮಾರಂಭಗಳ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿರೋದು ಗ್ರಾಹಕರಲ್ಲಿ ಆತಂಕ ತಂದಿದೆ. ಮದುವೆಗೆ ಆಭರಣಗಳನ್ನು ಮಾಡಿಸೋದು ಹೇಗೆ ಅಂತಾ ಚಿಂತಿತರಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ರೇಟ್ ಮತ್ತಷ್ಟು ಗಗನಕ್ಕೆ ಏರುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ.

Share This Article