ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಲವು ರಾಷ್ಟ್ರಗಳ ಮೇಲೆ ಪ್ರತಿಸುಂಕ ವಿಧಿಸಿದ ಬಳಿಕ ವ್ಯಾಪಾರ, ವಾಣಿಜ್ಯ ವಲಯದಲ್ಲಿ ಏರಿಳಿತ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲೂ ಕೂಡ ಹಾವು-ಏಣಿ ಆಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳು ಯುಎಸ್ ಟ್ರೆಷರಿ ಬಿಲ್‌ಗಳ (‘ಟಿ-ಬಿಲ್’ ಯುಎಸ್ ಸರ್ಕಾರದ ಖಜಾನೆ ಇಲಾಖೆಯಿಂದ ಬೆಂಬಲಿತವಾದ ಅಲ್ಪಾವಧಿಯ ಯುಎಸ್ ಸರ್ಕಾರದ ಸಾಲದ ಬಾಧ್ಯತೆಯಾಗಿದೆ) ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಸಹ ಚಿನ್ನದ ಬೆಲೆ ಮಾತ್ರ ಗಗನಕ್ಕೆ ಏರುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಜನರ ಭಾವನೆಯಾಗಿದ್ದು, ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಈ ಕಲ್ಪನೆ ನಿಜವೇ? ಪ್ರಸ್ತುತ ಆರ್ಥಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ತನ್ನ ಮೌಲ್ಯ ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಹೌದು.. ಎಂಬುದೇ ಉತ್ತರ.
ಟ್ರಂಪ್ ಪ್ರತಿಸುಂಕ (Tariff) ವಿಧಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಚಾಟಿ ಬೀಸಿದ್ದರಿಂದ ಚಿನ್ನವು (Gold Price Hike) ಎಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅದರ ಬೆಲೆಯೇ ಸೂಚಿಸುತ್ತಿದೆ. ಇದೇ ಮಾರ್ಚ್ 15ರ ಹೊತ್ತಿಗೆ ಮೊದಲ ಬಾರಿಗೆ ಚಿನ್ನವು ‘ಔನ್ಸ್’ಗೆ (28.34 ಗ್ರಾಂ) ಅಂದಾಜು 2,56,161 ರೂ. (3,000 ಡಾಲರ್) ಆಗಿದೆ. ಸ್ಥಳೀಯವಾಗಿ ಗಮನಿಸಿದರೆ, ಚಿನ್ನದ ಬೆಲೆಯು 10 ಗ್ರಾಂಗೆ 95,000 ರೂ.ಗೆ ಏರಿಕೆ ಕಂಡಿದೆ. ಹಳದಿ ಲೋಹದ ಹೊಳಪಿನ ಓಟವು, ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಸಂಗ್ರಹಣೆ, ಹಣದುಬ್ಬರದ ಕಾಳಜಿ ಮತ್ತು ಸಾಂಕ್ರಾಮಿಕ ನಂತರ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಮುಂದುವರಿದಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಏನಿದು ಯುಎಸ್ ಟ್ರೆಷರಿ ಬಾಂಡ್?
ಜಗತ್ತಿನ ದೈತ್ಯ ಅಮೆರಿಕದ ಆರ್ಥಿಕತೆ ನಿಂತಿರುವುದೇ ಟ್ರೆಷರಿ ಬಾಂಡ್ ಮೇಲೆ. ಯುಎಸ್ ಸರ್ಕಾರಕ್ಕೆ ಪ್ರತಿ ವರ್ಷ ಸಾಕಷ್ಟು ಹಣ ಬೇಕು, ಸಂಬಳ ನೀಡಬೇಕು, ಸೈನ್ಯಕ್ಕೆ ಹಣ ಬೇಕು, ರಸ್ತೆ-ಆಸ್ಪತ್ರೆ ಇತರೆ ಮೂಲಸೌಕರ್ಯಗಳಿಗೂ ಸಾಲ ಮಾಡಿ ಹಣ ತರುತ್ತದೆ. ಈ ಸಾಲವನ್ನು ಟ್ರೆಷರಿ ಬಾಂಡ್‌ನಿಂದ ಅಮೆರಿಕ ಸರ್ಕಾರಕ್ಕೆ ಬರುತ್ತದೆ. ಅಮೆರಿಕ ಸರ್ಕಾರ, ಅಲ್ಪಾವಧಿ-ಮಧ್ಯಮ-ಧೀರ್ಘಾವಧಿ ಎಂದು ಮೂರು ವಿಧದಲ್ಲಿ ಬಾಂಡ್ ಬಿಡುಗಡೆ ಮಾಡುತ್ತದೆ. ಈ ಬಾಂಡನ್ನು ಸಾಮಾನ್ಯ ಜನರು, ಕಂಪನಿಗಳು ಮತ್ತು ಯಾವುದೇ ದೇಶವು ಖರೀದಿಸಲು ಅವಕಾಶ ಇದೆ. ಅಮೆರಿಕದ ಸಾಲದಲ್ಲಿ ಶೇ.30 ವಿದೇಶಿ ಹೂಡಿಕೆಗಳಿಗೆ ಮಾತ್ರ ಅವಕಾಶ ಇದೆ. ಜಗತ್ತಿನಲ್ಲಿ ವ್ಯಾಪಾರ, ವಹಿವಾಟನ್ನು ಡಾಲರ್ ಮುಖಾಂತರವೇ ನಡೆಸಲಾಗುವುದು. ಹೀಗಾಗಿ, ಬಾಂಡ್ ಮೂಲಕ ಮೀಸಲು ನಿಧಿ ಖರೀದಿಸಲು ಇತರೆ ದೇಶಗಳು ಮುಂದಾಗುತ್ತವೆ. ಯಾವ ದೇಶ ಹೆಚ್ಚು ಮೀಸಲು ನಿಧಿ ಹೊಂದಿರುತ್ತೋ ಅದು ಆರ್ಥಿಕವಾಗಿ ಸುಭದ್ರವಾಗಿರುತ್ತದೆ.
ಟ್ಯಾರಿಫ್ ಅವ್ಯವಸ್ಥೆ ನಡುವೆ ಚಿನ್ನದ ಏರಿಕೆ
ಎಸ್&ಪಿ 500 (ಸ್ಟಾಕ್ ಮಾರುಕಟ್ಟೆ ಸೂಚ್ಯಂಕ) ಈ ತಿಂಗಳ ಆರಂಭದಲ್ಲಿ 10.5% ಕುಸಿದಾಗ, ಮಾರುಕಟ್ಟೆ ಮೌಲ್ಯ ಕೂಡ 6.6 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿತು. ಇದರ ಎಫೆಕ್ಟ್‌ನಿಂದಾಗಿ ಅಮೆರಿಕ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿರುವವರು, ಅದನ್ನು ಹಿಂತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಕಡೆ ಮುಖ ಮಾಡಿದ್ದಾರೆ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಾಗಲಿ ಅಥವಾ ಅದರ ಮೇಲಿನ ಹೂಡಿಕೆಗೆ ಎಫೆಕ್ಟ್ ಆಗಲಿ ಆಗಿಲ್ಲ. ಇದನ್ನೂ ಓದಿ: ಟ್ಯಾರಿಫ್ ವಾರ್‌ಗೆ ತಾತ್ಕಾಲಿಕ ಬ್ರೇಕ್ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ
‘ಚಿನ್ನ ಯಾವತ್ತೂ ಸುರಕ್ಷಿತ ಧಾಮ ಇದ್ದಂತೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ದುರ್ಬಲಗೊಂಡಿಲ್ಲ. ಆರ್ಥಿಕ ದಿವಾಳಿ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೂ, ನಂತರದ ದಿನಗಳಲ್ಲಿ ಅದರ ಬೆಲೆ ಏರಿಕೆಯನ್ನು ನಾವು ನೋಡುತ್ತೇವೆ. ಚಿನ್ನದ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ’ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಸರಕುಗಳ ವಿಶ್ಲೇಷಕ ಲೀನಾ ಥಾಮಸ್ ವಿಶ್ಲೇಷಿಸಿದ್ದಾರೆ. 2020ರ ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಕುಸಿತ ಕಂಡಾಗ, ಚಿನ್ನವೂ ಶೇ.5ರಷ್ಟು ಕುಸಿದಿತ್ತು. ಅಷ್ಟೇ ತ್ವರಿತವಾಗಿ ಏರಿಕೆ ಕಂಡಿತು ಎಂದು ಥಾಮಸ್ ತಿಳಿಸಿದ್ದಾರೆ.
‘ಸುರಕ್ಷಿತ ಧಾಮ’ ಚಿನ್ನ
ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ಸುರಕ್ಷಿತ ಧಾಮ ಎಂಬ ಭಾವನೆ ದೀರ್ಘಕಾಲದ್ದಾಗಿದೆ. ಯುಎಸ್, ಭಾರತ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಜನಪ್ರಿಯ ಲೋಹವಾಗಿದೆ. ಮಾನವ ಇತಿಹಾಸದಲ್ಲಿ ಇದುವರೆಗೆ ಸುಮಾರು 2 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಗಣಿಗಾರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮೇಲಿನ ಆಕರ್ಷಣೆಯೂ ಹೆಚ್ಚಾಗಿದೆ. ಹಿಂದೆ 28 ಗ್ರಾಂ ಚಿನ್ನದ ಬೆಲೆಯು ಅಂದಾಜು 85,387 ರೂ.ನಿಂದ 1,70,774 ಡಾಲರ್‌ಗೆ ಏರಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿತ್ತು. ಬಳಿಕ ಅಂದಾಜು 2,56,161 ರೂ. ಗಡಿದಾಟಲು ಕೇವಲ 5 ವರ್ಷಗಳನ್ನಷ್ಟೇ ತೆಗೆದುಕೊಂಡಿದೆ. ಇದು ಮೂರು ವರ್ಷದ ಅವಧಿಯಲ್ಲಿ 3,41,549 ರೂ.ಗೆ ಏರಬಹುದು ಎಂದು ಅಂದಾಜು 3,41,549 ರೂ.ಗೆ ಹೆಚ್ಚಬಹುದು ಎನ್ನಲಾಗಿದೆ. ಇದನ್ನೂ ಓದಿ: ‘ಆಪಲ್’ ಮೇಲೆ ಟ್ರಂಪ್ ಟ್ಯಾರಿಫ್ ಎಫೆಕ್ಟ್; ಮುಂದಿನ ಐಫೋನ್ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?
ಗೋಲ್ಡ್ಮನ್ ಸ್ಯಾಚ್ಸ್ ತನ್ನ 2025 ರ ಅಂತ್ಯದ ಚಿನ್ನದ ಬೆಲೆ ಮುನ್ಸೂಚನೆಯನ್ನು $3,300 ರಿಂದ $3,700ಗೆ, $3,650-$3,950 ರ ಯೋಜಿತ ಶ್ರೇಣಿಯೊಂದಿಗೆ ಹೆಚ್ಚಿಸಿತು. ‘ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕವಾಗಿ 24-25 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯ ನಂತರ, ಚಿನ್ನ ಮತ್ತಷ್ಟು ವಿಜೃಂಭಿಸುತ್ತಿದೆ. ಜಾಗತಿಕವಾಗಿ ಸೂಕ್ಷ್ಮ ಮತ್ತು ಸ್ಥೂಲ ರಂಗಗಳಲ್ಲಿ ಸುಂಕದ ಮೇಲಿನ ಅನಿಶ್ಚಿತತೆಯಿಂದಾಗಿ, ಚಿನ್ನವು ತುಂಬಾ ಪ್ರಬಲವಾಗಿ ಕಾಣುತ್ತದೆ. ಅನಿಶ್ಚಿತತೆ ಇದ್ದಾಗಲೆಲ್ಲಾ ಚಿನ್ನವು ಸುರಕ್ಷಿತ ಧಾಮ ಆಸ್ತಿ ಎಂದೇ ಪರಿಗಣಿತವಾಗಿದೆ’ ಎಂದು ಮೋತಿಲಾಲ್ ಒಸ್ವಾಲ್ ಫಿನಾಲ್ಸಿಯಲ್ ಸರ್ವಿಸಸ್‌ನ ರಿಸರ್ಚ್ ಕಮಾಡಿಟಿಸ್‌ನ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.
ಚಿನ್ನದತ್ತ ಕೇಂದ್ರೀಯ ಬ್ಯಾಂಕ್‌ಗಳ ಚಿತ್ತ
ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲುಗಳಲ್ಲಿ ಅಮೆರಿಕ ಡಾಲರ್‌ಗಳ ಪಾಲನ್ನು (ಯುಎಸ್ ಮೀಸಲು ನಿಧಿ) ಕಡಿಮೆ ಮಾಡಲು ಮುಂದಾಗಿವೆ. ಬದಲಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಟ್ರಂಪ್ ಪ್ರತಿಸುಂಕ ವಿಧಿಸಿದಾಗಿನಿಂದ ಮಾರುಕಟ್ಟೆ ವಲಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು, ಯುಎಸ್ ಟ್ರೆಷರಿ ಬಿಲ್ ನಮಗೆ ಸಮಸ್ಯೆ ತಂದೊಡ್ಡದ ಆಸ್ತಿಯಾಗಿ ಅರ್ಹತೆ ಪಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೂಡಿಕೆದಾರರು ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ
ಈಗ ಚಿನ್ನದ ಬೆಲೆ ಎಷ್ಟಿದೆ?
ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂಗೆ 8,945 ರೂ. ಇದೆ. 24 ಕ್ಯಾರೆಟ್ 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಈಗಿನ ದರ 89,450 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 97,580 ರೂ.ಗೆ ಏರಿದೆ.