ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಚಿನ್ನದ ದರ ಇಳಿಕೆಯಾಗಿದ್ದನ್ನು ನೋಡಿ ಇಂದು ಚಿನ್ನ ಖರೀದಿಸಲು ಹೋಗಿದ್ದ ಗ್ರಾಹಕರಿಗೆ ಶಾಕ್ ಕಾದಿತ್ತು. ಕಾರಣ ನಿನ್ನೆ 140 ರೂ. ಇಳಿಕೆ ಕಂಡ ಚಿನ್ನದ ರೇಟ್ ಇಂದು 290 ರೂ. ಏರಿಕೆಯಾಗಿತ್ತು.
ದೀಪಾವಳಿ ಹಿನ್ನೆಲೆಯಲ್ಲಿ ಸ್ಥಳೀಯ ಜ್ಯುವೆಲ್ಲರಿಗಳಿಂದ ಹೆಚ್ಚಾದ ಬೇಡಿಕೆಯೇ ಇಂದಿನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಚಿನಿವಾರ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿರುವವರು ಹೇಳಿದ್ದಾರೆ. ಚಿನ್ನದ ದರ ಕಳೆದ 3 ವಾರದಲ್ಲೇ ಮೊದಲ ಬಾರಿಗೆ ಹೆಚ್ಚಾಗಿದ್ದು 10 ಗ್ರಾಂ ಚಿನ್ನದ ದರ 31 ಸಾವಿರ ರೂ.ಗಳ ಗಡಿ ದಾಟಿತ್ತು.
Advertisement
Advertisement
ದೀಪಾವಳಿ ಹಿನ್ನೆಲೆಯಲ್ಲಿ ದಿಢೀರ್ ಬೇಡಿಕೆ ಹೆಚ್ಚಾಯಿತು. ಈ ಬೇಡಿಕೆಯನ್ನು ಪೂರೈಸಲು ವರ್ತಕರು ಚಿನ್ನ ಖರೀದಿಗೆ ತೊಡಗಿದ್ದೇ ಬೆಲೆ ಏರಿಕೆಗೆ ಪ್ರಮುಖ ಕಾರಣ. ಜಾಗತಿಕ ಮಟ್ಟದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ ಸ್ಥಳೀಯ ಬೇಡಿಕೆ ಹೆಚ್ಚಾಯಿತು. ಇದರ ಪರಿಣಾಮ ದರ ಏರಿಕೆಯಾಗಿದೆ. ಸೆಪ್ಟೆಂಬರ್ 27ರಂದು ಚಿನ್ನದ ದರ 31 ಸಾವಿರ ರೂ.ಗಳ ಗಡಿ ದಾಟಿತ್ತು. ಆದರೆ ಮಂಗಳವಾರ ‘ಧನ್ ತೆರಾಸ್’ ಇದ್ದರೂ ಚಿನ್ನದ ದರದಲ್ಲಿ 140 ರೂ. ಇಳಿಕೆಯಾಗಿತ್ತು.
Advertisement
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 290 ರೂ. ಏರಿಕೆ ಕಂಡಿದ್ದು, ಶೇ.99.9 ಮತ್ತು ಶೇ.99.5 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 31,000 ರೂ. ಮತ್ತು 30,850 ರೂ. ಆಗಿದೆ.
Advertisement