ಬೆಂಗಳೂರು: ಕಳೆದ ಆರು ವರ್ಷದಲ್ಲಿ ಬಂಗಾರ ದಾಖಲೆ ಬರೆದಿದ್ದು, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಏರಿಕೆ ಕಂಡ ಬೆಲೆಯಾಗಿದೆ. ಕಳೆದ ತಿಂಗಳಿಗೂ, ಈ ತಿಂಗಳಿಗೂ ಚಿನ್ನದ ದರದ ವ್ಯತ್ಯಾಸ ನೋಡುವುದಾದರೆ, ಕಳೆದ ತಿಂಗಳು 22 ಕ್ಯಾರೆಟ್ ಚಿನ್ನದ ಬೆಲೆ-30,190 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 33,290 ರೂ. ಇತ್ತು. ಇಂದು 22 ಕ್ಯಾರೆಟ್ ಚಿನ್ನದ ಬೆಲೆ – 31,980 ರೂ. ಹಾಗೂ 24 ಕ್ಯಾರೆಟ್ ಚಿನ್ನದ ದರ – 34,200 ರೂ.ಗೆ ಏರಿಕೆಯಾಗಿದೆ.
Advertisement
Advertisement
ಒಂದು ತಿಂಗಳಲ್ಲಿ ಒಡವೆ ಚಿನ್ನ 10 ಗ್ರಾಂಗೆ 800 ರೂಪಾಯಿಯಷ್ಟು ಏರಿಕೆಯಾಗಿರೋದಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎಂದು ಚಿನ್ನದ ವ್ಯಾಪಾರಸ್ಥರು ಹೇಳುತ್ತಾರೆ. ಸದ್ಯ ಆಷಾಢ ಬಂದರೆ ಚಿನ್ನದ ಬೆಲೆ ಕಡಿಮೆಯಾಗುತ್ತೆ ಎನ್ನುವ ಮಾತು ಈ ಬಾರಿ ಸುಳ್ಳಾಗಿದೆ.
Advertisement
ಬಂಗಾರದ ದರ ಬೆಲೆ ಹೆಚ್ಚಳಕ್ಕೆ ಕಾರಣವೆನೆಂದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ಹಾಗೂ ಇರಾನ್ ನಡುವಿನ ವ್ಯಾಪಾರ ಪೈಪೋಟಿಯಾಗಿದೆ. ಇತ್ತ ಸೆಂಟ್ರಲ್ ಬ್ಯಾಂಕ್ ಚಿನ್ನವನ್ನು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಿರುವ ಪರಿಣಾಮ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.