ಲಕ್ನೋ: ಅಯೋಧ್ಯೆಯ ರಾಮಮಂದಿರ (Ayodhya Ram Mandir) ಮತ್ತೊಂದು ಕ್ಷಣಕ್ಕೆ ಸಜ್ಜಾಗಿದೆ. 2ನೇ ಬಾರಿ ಪ್ರಾಣ ಪ್ರತಿಷ್ಠೆಗೆ ಮುನ್ನ ಬಂಗಾರದ ಗುಮ್ಮಟ (Gold Plated Shikhara) ಉದ್ಘಾಟನೆ ಆಗಲಿದೆ.
#WATCH | Ayodhya | Gold-plated ‘Shikhara’ installed on top of Ram Temple ahead of the 3rd June Pran Pratishtha ceremony of Ram Darbar at the temple pic.twitter.com/bPtkTbbBwU
— ANI (@ANI) June 2, 2025
ಗರ್ಭಗುಡಿಯ ಮೇಲೆ ಇರುವ ಬಂಗಾರದ ಶಿಖರವು ಪಾವಿತ್ರ್ಯತೆ, ಪ್ರಗತಿ ಮತ್ತು ಭಕ್ತಿಯ ಸಂಕೇತವಾಗಿದೆ. ಕಿಮೀಗಳ ದೂರಕ್ಕೆ ಗೋಚರಿಸ್ತಿರುವ ಈ ನಯನಮನೋಹರ ಗುಮ್ಮಟವು ಭಕ್ತರ ಕಣ್ಮನ ತಣಿಸುತ್ತಿದೆ. ಭಕ್ತಿ-ಭಾವವನ್ನು ಇಮ್ಮಡಿಗೊಳಿಸುತ್ತಿದೆ. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್ಗಳು ಅರೆಸ್ಟ್
ಅಲ್ಲದೇ ಮಂಗಳವಾರದಿಂದ 3 ದಿನ 2ನೇ ಬಾರಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಜೊತೆಗೆ ಮೊದಲ ಮಹಡಿಯಲ್ಲಿ ಇತರೆ ದೇವರ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಜೊತೆಗೆ ʻರಾಮ ದರ್ಬಾರ್ʼ ಕೂಡ ನಡೆಯಲಿದೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಯ 3 ರಾಜ್ಯಗಳಲ್ಲಿದ್ದ ಆಸ್ತಿ ಮೇಲೆ ಸಿಬಿಐ ದಾಳಿ – 1 ಕೋಟಿ ನಗದು, 3.5 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಪತ್ತೆ
ಈಗಾಗಲೇ ಸಾವಿರಾರು ಭಕ್ತರು ಅಯೋಧ್ಯೆಯತ್ತ ಮುಖಮಾಡಿದ್ದಾರೆ. ಈ ಮಧ್ಯೆ, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ತಂದೆ ಎಲಾನ್ ಮಸ್ಕ್ ಭಾರತಕ್ಕೆ ಬಂದಿದ್ದು, ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಪಂಜಾಬ್ ವಿರುದ್ಧ ಫೈನಲ್ ಮ್ಯಾಚ್ – ಆರ್ಸಿಬಿ ಫ್ಯಾನ್ಸ್ಗೆ 1 ರೂ.ಗೆ ಆಫರ್ ಕೊಟ್ಟ ಸ್ನೂಕರ್ ಕ್ಲಬ್