ದಾವಣಗೆರೆ: ಸನ್ಯಾಸಿಗಳ ಸೋಗಿನಲ್ಲಿ ಬಂದ ಖದೀಮರಿಬ್ಬರು ಮಹಿಳೆಯೊಬ್ಬರ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಬಿ.ಟಿ ಗಲ್ಲಿಯ ಇಸ್ಲಾಂ ಪೇಟೆಯಲ್ಲಿ ಇಂದು ನಡೆದಿದೆ.
ಚಂದನ(58) ಒಡವೆ ಕಳೆದುಕೊಂಡ ಮಹಿಳೆ. ಇಸ್ಲಾಂ ಪೇಟೆ ಬಳಿ ಹೋಗುತ್ತಿದ್ದ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕೊರಳಲ್ಲಿದ್ದ ಚಿನ್ನದ ಸರ ಹಾಗೂ ಉಂಗುರ ಕಸಿದು ಖದೀಮರು ಪರಾರಿಯಾಗಿದ್ದಾರೆ. 45 ಗ್ರಾಂ ಚಿನ್ನದ ಸರ ಹಾಗೂ ಕೈ ಬೆರಳಲ್ಲಿದ್ದ 3ಗ್ರಾಂ ಚಿನ್ನದ ಉಂಗುರ ಕಳ್ಳತನವಾಗಿದೆ.
ದಾರಿಯಲ್ಲಿ ಮಹಿಳೆ ಒಬ್ಬರೇ ಹೋಗುತ್ತಿದ್ದ ವೇಳೆ ಖದೀಮರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಸನ್ಯಾಸಿಗಳ ವೇಷಧರಿಸಿ ಕಾರಿನಲ್ಲಿ ಬಂದ ಕಳ್ಳರು ಮಹಿಳೆಯನ್ನು ಅಡ್ಡ ಹಾಕಿದ್ದಾರೆ. ಬಳಿಕ ಮಹಿಳೆ ಬಳಿ ನಾವು ಹರಿದ್ವಾರದಿಂದ ಬಂದ ಸನ್ಯಾಸಿಗಳು, ನಿಮಗೆ ಒಳ್ಳೆಯದು ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿ ಮೊದಲು ನಂಬಿಸಿದ್ದಾರೆ. ನಂತರ ಮಹಿಳೆಯ ಮುಖಕ್ಕೆ ತೀರ್ಥವೆಂದು ನೀರು ಚಿಮುಕಿಸಿ ಏಕಾಏಕಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಉಂಗುರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಘಟನೆ ಕುರಿತು ಮಹಿಳೆ ಬಸವನಗರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv