ಬಾಗಲಕೋಟೆ: ಮಹಾರಾಷ್ಟ್ರ ರಾಜ್ಯದ ಸೋಲಾಪುರ ಮೂಲದ ಗೋಲ್ಡ್ ಮ್ಯಾನ್ ಖ್ಯಾತಿಯ ವ್ಯಕ್ತಿ ಬುಧವಾರ ಬಾಗಲಕೋಟೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆಯೂ ಬಾಗಲಕೋಟೆ ನಗರದ ಹಳೇ ಬಸ್ ನಿಲ್ದಾಣ ಬಳಿಯಿರುವ ಚೌಧರಿ ಫೋಟೋ ಸ್ಟುಡಿಯೋಗೆ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು.
ಗೋಲ್ಡ್ ಮ್ಯಾನ್ ಬಾಗಲಕೋಟೆ ಸಮೀಪದ ತಾಂಡವೊಂದರಲ್ಲಿ ಮದುವೆಗೆ ಬಂದಿದ್ದರು. ಬಳಿಕ ಮಧ್ಯಾಹ್ನ ಬಾಗಲಕೋಟೆ ನಗರದ ಚೌಧರಿ ಫೋಟೋ ಸ್ಟುಡಿಯೋಗೆ ಮೂರನೇ ಬಾರಿ ಭೇಟಿ ನೀಡಿದ್ದರು. ಸ್ಟುಡಿಯೋ ಒಳಗೆ ಗೋಲ್ಡ್ ಮ್ಯಾನ್ ಮೈಯೆಲ್ಲಾ ಬಂಗಾರ ಹಾಕಿರೋದನ್ನು ಕಂಡ ಜನ ನೋಡೋಕೆ ಮುಗಿಬಿದ್ದಿದ್ದಾರೆ. ಸ್ಟುಡಿಯೋ ಹೊರಗಡೆ 15 ಜನ ಅಂಗರಕ್ಷಕರು ರಕ್ಷಣೆಗಾಗಿ ನಿಂತಿದ್ದರು.
ಮಹಾರಾಷ್ಟ್ರ ನೋಂದಣಿಯ ಇರುವ ಮೂರು ಕಾರುಗಳು ಚೌಧರಿ ಸ್ಟುಡಿಯೋ ಬಳಿ ನಿಂತಿದ್ದವು. ಇನ್ನು ಚೌಧರಿ ಸ್ಟುಡಿಯೋಗೆ ಗೋಲ್ಡ್ ಮ್ಯಾನ್ ಫೋಟೋ ತೆಗೆಸಿಕೊಳ್ಳಲು ಹೋಗಿದ್ದರು. ಫೋಟೋ ಕ್ಲಿಕ್ಕಿಸಿಕೊಂಡ ಬಳಿಕ ಹೊರಗಡೆ ಬಂದ ಗೋಲ್ಡ್ ಮ್ಯಾನ್ ನೋಡಲು, ಜನ ಮುಗಿಬಿದ್ದು, ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದರು. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಆಗಿತ್ತು. ಬಳಿಕ ಬಾಗಲಕೋಟೆಯಿಂದ ಗೋಲ್ಡ್ ಮ್ಯಾನ್ ತರಾತುರಿಯಲ್ಲಿ ನಿರ್ಗಮಿಸಿದರು. ಕೊರಳಲ್ಲಿ ದಪ್ಪವಾದ ಸರ, ಕೈಗೆ ದಪ್ಪನೆಯ ತೋಡುಬಳೆ, ಉಂಗುರ, ಕೂಲಿಂಗ್ ಗ್ಲಾಸ್ ಜನರ ಗಮನ ಸೆಳೆಯಿತು. ಆದ್ರೆ ಈ ಗೋಲ್ಡ್ ಮ್ಯಾನ್ ಹೆಸರು ತಿಳಿದು ಬಂದಿಲ್ಲ.