ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಹೋಟೆಲ್‍ನಲ್ಲಿ ಚಿನ್ನಾಭರಣ ಮೇಳ ಏರ್ಪಡಿಸಲಾಗಿತ್ತು. ಇದನ್ನೇ ಟಾರ್ಗೆಟ್ ಮಾಡಿದ್ದ ಐನಾತಿ ಕಳ್ಳಿಯರ ಗ್ಯಾಂಗ್ ಮೇಳಕ್ಕೆ ಟಿಪ್‍ಟಾಪ್ ಆಗಿ ಬಂದು ಗುಂಪಿನಲ್ಲಿ ಚಿನ್ನದ ಸರ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದೇ ತಿಂಗಳ 18ರಿಂದ ಮೂರು ದಿನಗಳ ಕಾಲ ಒರಾಯನ್ ಮಾಲ್ ಪಕ್ಕದಲ್ಲಿರುವ ಶೆಲ್ಟನ್ ಹೋಟಲ್‍ನಲ್ಲಿ ಚಿನ್ನಾಭರಣ ಮೇಳೆ ಆಯೋಜನೆ ಮಾಡಲಾಗಿತ್ತು. ಚಿನ್ನಾಭರಣ ಮೇಳದಲ್ಲಿ ನಗರದ ಹಾಗೂ ಹೊರ ರಾಜ್ಯದ ಪ್ರತಿಷ್ಠಿತ ಚಿನ್ನದ ಮಳಿಗೆಗಳು ಭಾಗಿಯಾಗಿದ್ದವು. ಮೂರು ದಿನಗಳ ಕಾಲ ನಡೆದ ಚಿನ್ನದ ಮೇಳಕ್ಕೆ ಸಾವಿರಾರರು ಜನ ಬಂದು ತಮ್ಮ ನೆಚ್ಚಿನ ಚಿನ್ನವನ್ನ ಖರೀದಿ ಮಾಡಿದ್ದರು.
Advertisement
Advertisement
ಮೇಳದಲ್ಲಿ ವೈಭವ್ ಚಿನ್ನದ ಮಳಿಗೆಯ 200 ಗ್ರಾಂ ತೂಕದ ಲಾಂಗ್ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ನೂರಾರು ಜನರ ನಡುವೆ ಸಿಸಿಟಿವಿ ಅಳವಿಡಿಸಿದ್ದರು ಚಿನ್ನಾಭರಣ ಕಳವು ಮಾಡಲು ಕಳ್ಳಿಯರ ಗ್ಯಾಂಗ್ ಯಶಸ್ವಿಯಾಗಿದೆ. ಐನಾತಿ ಕಳ್ಳಿಯರ ಕೃತ್ಯ ಸದ್ಯ ಸಿಸಿಟಿವಿಯಲ್ಲಿ ಬಯಲಾಗಿದೆ. ಘಟನೆ ಸಂಬಂದ ವೈಭವ್ ಚಿನ್ನದ ಮಳಿಗೆಯ ಮಾಲೀಕರು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳಿಯರಿಗೆ ಬಿಸಿದ್ದಾರೆ.