– 1.44 ಕೋಟಿ ನಗದು, 4 ಗೋಲ್ಡ್ ಬಿಸ್ಕೆಟ್, 16 ಚಿನ್ನದ ನಾಣ್ಯಗಳು ಪತ್ತೆ
ಭುವನೇಶ್ವರ: ಒಡಿಶಾದ ಜೈಪುರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಮನೆ ಮೇಲೆ ವಿಜಿಲೆನ್ಸ್ ಅಧಿಕಾರಿಗಳು (Vigilance officer) ದಾಳಿ ನಡೆಸಿದ್ದು, ಸಂಪತ್ತಿನ ಖಜಾನೆಯೇ ಪತ್ತೆಯಾಗಿದೆ.ಇದನ್ನೂ ಓದಿ: ಪತಿಯನ್ನು ಪತ್ನಿ ನದಿಗೆ ತಳ್ಳಿದ್ದ ಆರೋಪ ಪ್ರಕರಣ – ಪತಿ ತಾತಪ್ಪ ಸೇರಿ 10 ಜನರ ವಿರುದ್ಧ ಪೋಕ್ಸೋ ಕೇಸ್
ಶುಕ್ರವಾರ (ಜು.25) ಬೆಳಗಿನ ಜಾವ ವಿಜಿಲೆನ್ಸ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿ ರಾಮಚಂದ್ರ ನೇಪಕ್ ಅವರ ಜೈಪುರ ನಿವಾಸ ಸೇರಿ ಆರು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 1.44 ಕೋಟಿ ರೂ. ನಗದು ಪತ್ತೆಯಾಗಿದ್ದು, ಹಣ ಎಣಿಕೆ ಯಂತ್ರವನ್ನು ತರೆಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ನಗದಿನ ಜೊತೆಗೆ 4 ಚಿನ್ನದ ಬಿಸ್ಕೆಟ್ ಮತ್ತು 16 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅಧಿಕಾರಿ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಆರೋಪ ಕೇಳಿ ಬಂದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಜೊತೆಗೆ ಅವರು ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮನೆ, ಅವರ ಅತ್ತೆಯ ಮನೆ ಹಾಗೂ ಭುವನೇಶ್ವರದಲ್ಲಿರುವ ಅವರ ಸಹೋದರನ ಫ್ಲಾಟ್ ಮೇಲೆಯೂ ದಾಳಿ ನಡೆದಿದೆ.ಇದನ್ನೂ ಓದಿ: 2 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣು