ಉಡುಪಿ: ಮೂರು ಕಡೆಯಿಂದ ಸುತ್ತುವರಿದು ವೃದ್ಧೆಯೊಬ್ಬರಿಂದ ಚಿನ್ನ ಎಗರಿಸಿದ್ದ ಮೂವರು ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಶೀಥಲ್, ಕಾಳಿಯಮ್ಮ, ಮಾರಿಯಮ್ಮ ಬಂಧಿತರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ (Puttur) ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳಿಯರು ಹೆಜಮಾಡಿಯ ಗರಡಿ ನೇಮೋತ್ಸವದಲ್ಲಿ ವೃದ್ಧೆಯ ಚಿನ್ನ ಎಗಿರಿಸಿದ್ದರು. ಇದನ್ನೂ ಓದಿ: ತಿರುಪತಿ | ಅಮಾನತಾಗಿದ್ದ ಪ್ರೊಫೆಸರ್ ಶವ ಕಾರಲ್ಲಿ ಪತ್ತೆ
ಮೂರು ಕಡೆಯಿಂದ ಸುತ್ತುವರಿದು ಚಿನ್ನ ಕದ್ದಿದ್ದರು. ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಎಗರಿಸಿದ್ದರು. ಕಳ್ಳಿಯರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಲೇಡಿ ಕಳ್ಳಿಯರಿಗೆ ಉಡುಪಿ ಪೊಲೀಸರು ಬಲೆಬೀಸಿದ್ದರು.

