ಚಿಕ್ಕೋಡಿ: ಬೆಳಗಾವಿ (Belgavi) ಜಿಲ್ಲೆಯ ಅಥಣಿ (Athani) ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ಪುರಸಭೆ ವಾಹನಗಳ ಮೂಲಕ ಕಸ ಸಂಗ್ರಹಿಸುವ ಪೌರಕಾರ್ಮಿಕರು (Civic Worker) ಕಸದಲ್ಲಿ ದೊರೆತ 50 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಸಂಬಂಧಪಟ್ಟ ಮಾಲೀಕರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
Advertisement
ಪ್ರತಿದಿನದಂತೆ ಮುಂಜಾನೆ ಎಂ.ಜಿ. ಮಾರ್ಕೆಟ್‍ನಲ್ಲಿ (M.G.Market) ಕಸ ಸಂಗ್ರಹಿಸಿದ ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ವಾಹನ ಚಾಲಕ ಬಸವರಾಜ ಕೋರಿ ಪಟ್ಟಣದ ಹೊರವಲಯದಲ್ಲಿ ವಾಹನದಲ್ಲಿನ ಕಸವನ್ನು ವಿಲೇವಾರಿ ಮಾಡಿದ್ದರು. ಚಿನ್ನದ ಸರವನ್ನು ಕಳೆದುಕೊಂಡ ಮಾಳಿ ಜ್ಯುವೆಲರಿ ಮಾಲೀಕರು ಕಾಗದ ಒಂದರಲ್ಲಿ ಪ್ಯಾಕ್ ಮಾಡಿಟ್ಟಿದ್ದ ಚಿನ್ನದ ಸರ ಕಸದ ಡಬ್ಬಿಯಲ್ಲಿ ಹೋಗಿರುವ ಸಂದೇಹವಿದೆ. ಸ್ವಲ್ಪ ಹುಡುಕಿ ನೋಡಿ ಎಂದು ಪೌರಕಾರ್ಮಿಕರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್
Advertisement
Advertisement
ನಂತರ ಎರಡನೇ ಬಾರಿಗೆ ಕಸ ವಿಲೇವಾರಿ ಮಾಡಲು ಹೋದಾಗ ಮೊದಲನೇ ಬಾರಿ ವಿಲೇವಾರಿ ಮಾಡಿದ್ದ ಕಸದಲ್ಲಿ ಚಿನ್ನದ ಸರ ದೊರಕಿದ್ದು, ಅದನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಪೌರಕಾರ್ಮಿಕ ಮಾರುತಿ ಭಜಂತ್ರಿ ಮತ್ತು ಬಸವರಾಜು ಕೋರಿ ಅವರನ್ನು ಪಟ್ಟಣದ ವ್ಯಾಪಾರಸ್ಥರು, ಪುರಸಭೆ ಮುಖ್ಯಾಧಿಕಾರಿ ಈರಣ್ಣಾ ದಡ್ಡಿ ಮತ್ತು ಪೌರಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಹೊಂದಿದ್ದ ಮಗಳ ಹತ್ಯೆ- ವೀಡಿಯೋ ಮಾಡಿ ತಪ್ಪೊಪ್ಪಿಕೊಂಡ ತಂದೆ