ಲಕ್ನೋ: ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸದ ಬುಟ್ಟಿಯಲ್ಲಿ ಲಕ್ಷಾಂತರ ಮೌಲ್ಯ ಬೆಲೆ ಬಾಳುವ 6 ಚಿನ್ನದ ಬಿಸ್ಕತ್ ಪತ್ತೆ ಆಗಿದೆ.
ಉತ್ತರಪ್ರದೇಶದ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 6 ಚಿನ್ನದ ಬಿಸ್ಕತ್‍ಗಳ ಬೆಲೆಯೂ ಒಟ್ಟಾರೆಯಾಗಿ 36.60 ಲಕ್ಷ ರೂ.ಗಳಾಗಿವೆ. 6 ಚಿನ್ನದ ಬಾರ್‌ಗಳನ್ನು ಕಪ್ಪು ಟೇಪ್‍ನಿಂದ ಸುತ್ತಿರುವ ಪ್ಲಾಸ್ಟಿಕ್‍ನಲ್ಲಿ ಅಡಗಿಸಿಟ್ಟಿದ್ದರು. ನಂತರ ಇದನ್ನು ವಿಮಾನ ನಿಲ್ದಾಣದ ಕಸದ ಬುಟ್ಟಿಗೆ ಎಸೆಯಲಾಗಿತ್ತು.
Advertisement
Advertisement
ಇದನ್ನು ನೋಡಿದ ಅಧಿಕಾರಿಗಳು ಚಿನ್ನದ ಬಿಸ್ಕತ್‍ನ್ನು ಜಪ್ತಿ ಮಾಡಲಾಗಿದ್ದು, ಕಸದ ಬುಟ್ಟಿಯಲ್ಲಿ ಚಿನ್ನ ಹೇಗೆ ಬಂತು. ಯಾರು ತಂದರು ಎಂಬ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದುಬೈನಿಂದ ಬಂದ ಕೆಲವು ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಿರುವ ಸಿಬ್ಬಂದಿಯನ್ನು ತನಿಖೆ ನಡೆಸುತ್ತಿದ್ದಾರೆ. ಆದರೂ ಈವರೆಗೂ ಆ ಚಿನ್ನದ ಬಿಸ್ಕತ್ ಯಾರದ್ದು ಎನ್ನುವುದು ಪತ್ತೆ ಆಗಿಲ್ಲ. ಇದನ್ನೂ ಓದಿ: ಡಿಕೆಶಿ ಕೈಎತ್ತಿದ ಬಳಿಕ ಕುಮಾರಸ್ವಾಮಿ ಅಬ್ಬೇಪಾರಿ ಆಗಿ ಬೀದಿಗೆ ಬಂದ್ರು, ಸಿದ್ದರಾಮಯ್ಯಗೂ ಇದೇ ಗತಿ: ಆರ್. ಅಶೋಕ್