ಚಾಮರಾಜನಗರ: ಪರಿಚಯಸ್ಥ ಮಹಿಳೆಯೊಬ್ಬರು ವೃದ್ಧೆ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ಚಾಮರಾಜನಗರ ಪಟ್ಟಣದ ಶಂಕರಪುರ ಬಡಾವಣೆಯಲ್ಲಿ ನಡೆದಿದೆ.
ವೃದ್ಧೆ ನಾಗಮ್ಮ ಎಂಬವರ ಮನೆಯಲ್ಲಿ ಕಳ್ಳತನ ಆಗಿದೆ. ಬೀರುವಿನಲ್ಲಿದ್ದ 75 ಗ್ರಾಂ ಚಿನ್ನ ಹಾಗೂ ಎರಡು ಲಕ್ಷ ಕಳ್ಳತನ ಪ್ರಕರಣದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಮಹಿಳೆಯ ಕಳ್ಳತನ ಸಿಸಿಟಿವಿಯಿಂದ ಬಯಲಾಗಿದೆ. ಕಾರಿನ ಹಿಂಭಾಗ ನಿಂತು ಹೊಂಚು ಹಾಕಿ ಮನೆಗೆ ಹೋಗಿ ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನವಾಗಿದೆ. ಕಳ್ಳತನದ ಬಗ್ಗೆ ಅನುಮಾನಗೊಂಡು ಚಾಮರಾಜನಗರ ಪಟ್ಟಣ ಪೊಲೀಸರಿಗೆ ದೂರು ನೀಡಲಾಗಿತ್ತು.
ದೂರಿನನ್ವಯ ಪೊಲೀಸರು ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಅಜ್ಜಿಯ ಪರಿಚಯಸ್ಥೆ ಮಹಿಳೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.