ಯಾದಗಿರಿ: ಯಾದಗಿರಿಯಲ್ಲಿ (Yadagiri) ನಗಾರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಕೃಷಿ ಭೂಮಿಯಲ್ಲಿ ನಿವೇಶನಗಳನ್ನು ವಿನ್ಯಾಸಗೊಳಿಸುವ ಮೂಲಕ ಮೊಟ್ಟೆ ದಾಖಲೆ ಸೃಷ್ಟಿಸಿ ಇಲ್ಲಿನ ನಗರಸಭೆಯಲ್ಲಿ ಅವುಗಳಿಗೆ ಖಾತಾ ನಕಲು ನೀಡಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಯಾದಗಿರಿ ಜಿಲ್ಲಾ ಕೇಂದ್ರವಾದ ಬಳಿಕ ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ರಾತೋರಾತ್ರಿ ಧನಿಕರಾಗಬೇಕು ಎಂಬ ಆಸೆಗೆ ಬಿದ್ದ ಕೆಲವರು ಅಡ್ಡ ಮಾರ್ಗದ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದು, ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಕೆಲಸ ಎಗ್ಗಿಲ್ಲದೆ ನಡೆದಿದ್ದು, ಇದಕ್ಕೆ ನಗರಸಭೆ ಅಧಿಕಾರಿಗಳೇ ಪರೋಕ್ಷ ಸಹಕಾರ ಕೊಟ್ಟಿರುವುದು ಬಯಲಾಗಿದೆ. 2019 ರಿಂದ 2023 ಮಾರ್ಚ್ ತಿಂಗಳವರೆಗೆ ನಗರಸಭೆಯಲ್ಲಿ ಬೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಇ- ಆಸ್ತಿ ತಂತ್ರಾಂಶದಲ್ಲಿ ಒಟ್ಟು 1,310 ಅನಧಿಕೃತ ಖಾತಾ ನೀಡಲಾಗಿದೆ. ಇದನ್ನೂ ಓದಿ: ಸಿಎಂ ಭೇಟಿಯಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಸ್ಥರು – ಸಿಐಡಿ ತನಿಖೆಗೆ ಮನವಿ
Advertisement
Advertisement
ನಗರ ವ್ಯಾಪ್ತಿಯ ಕೃಷಿ (ಗ್ರೀನ್ ಹಾಗೂ ಯಲ್ಲೋ ಬೆಲ್ಸ್) ಜಮೀನಿನಲ್ಲಿ ಎನ್‍ಎ (ಕೃಷಿಯೇತರ) ಆಗದೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ವಿನ್ಯಾಸಗೊಳಿಸಿದ ನಿವೇಶನಗಳನ್ನು ಸೃಷ್ಟಿಸಲಾಗಿದೆ. ಒಟ್ಟು 45 ಎಕರೆ ಜಮೀನಿನಲ್ಲಿ 30/40 ಚದರ ಅಡಿ ಅಳತೆಯ 1310 ನಿವೇಶನಗಳಿಗೆ ಖಾತಾ ನೀಡಲಾಗಿದೆ. ಎನ್ ಶುಲ್ಕ, ಲೇಔಟ್ ಶುಲ್ಕ, ಲೇಔಟ್ ಅಭಿವೃದ್ಧಿಪಡಿಸಲು ಪ್ರಾಧಿಕಾರಕ್ಕೆ ಸಲ್ಲಿಸುವ ಶುಲ್ಕ ಭರಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 18,12,75000 ನಷ್ಟವಾಗಿದೆ ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ಕಲಬುರಗಿ ವಿಭಾಗೀಯ ಆಯುಕ್ತರಿಗೆ ಸಲ್ಲಿಸಿದ ದಾಖಲೆಗಳಲ್ಲಿ ವಿವರಿಸಿದ್ದಾರೆ.
Advertisement
ಈ ಹಗರಣದಲ್ಲಿ ನಗರಸಭೆ ಹಿಂದಿನ ಪೌರಾಯುಕ್ತರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಲ್ಲದ ಕಚೇರಿಯ ಎತ್ತರ, ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು ಸಹ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸದ್ಯ ಅವರ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಹೀಗಾಗಿ ಸರ್ಕಾರ ಮೊಟ್ಟೆ ದಾಖಲೆಯ ಖಾತಾ ವಿತರಣೆ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಲ್ಲದೆ ನಷ್ಟಭರ್ತಿಗೆ ಕ್ರಮ ಕೈಗೊಳ್ಳುವ ಮೂಲಕ ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟುವ ಕೆಲಸ ಮಾಡುವುದು ಜರೂರಿ ಎನಿಸಿದೆ.
ಯಾರ ಯಾರ ಅವಧಿಯಲ್ಲಿ ಎಷ್ಟೆಷ್ಟು ಹಂಚಿಕೆ: 2019 ರಲ್ಲಿ ಪೌರಾಯುಕ್ತರಾಗಿದ್ದ ರಮೇಶ್ ಸುಣಗಾರ ಹಾಗೂ ಕಂದಾಯ ಅಧಿಕಾರಿ ಪ್ರಶಾಪ ಅಲೆಕ್ಸಾಂಡರ್ ಸೇರಿ ಒಟ್ಟು 139 ಫಾರಂ -3 ನೀಡಿದರೆ, 2020-21ನೇ ಸಾಲಿನಲ್ಲಿ ಪೌರಾಯುಕ್ತ ಎಚ್.ಲಕ್ಕಪ್ಪ 169, ಅದೇ ಸಾಲಿನಲ್ಲಿ ಪೌರಾಯುಕ್ತರಾಗಿದ್ದ ಬಿ.ಟಿ.ನಾಯಕ್ 468, ಪ್ರಭಾರಿ ಪೌರಾಯುಕ್ತ ಹುದ್ದೆಗೆ ಬಂದ ಎಚ್.ಲಕ್ಕಪ್ಪ 111 ಹಾಗೂ 2023 ರ ಮಾರ್ಚ್‍ವರಗೆ ಪೌರಾಯುಕ್ತರಾಗಿದ್ದ ಶರಣಪ್ಪ ಎಸ್. ಮತ್ತು ಕಂದಾಯ ಅಧಿಕಾರಿ ನರಸಿಂಹರೆಡ್ಡಿ ಸೇರಿ 423 ಹೀಗೆ ಒಟ್ಟು ಮೂರು ವರ್ಷಗಳಲ್ಲಿ 1310 ಖಾತಾ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ರೂ. ನಷ್ಟ ಮಾಡಿರುವುದು ಸ್ಪಷ್ಟವಾಗಿದೆ.
Web Stories