ಹುಬ್ಬಳ್ಳಿ:ಗೋಡ್ಸೆಯ ಹಿಂದೂ ಧರ್ಮದ ಬಗೆಗಿನ ಆಲೋಚನೆಗಳನ್ನು ಸಂಭ್ರಮಿಸಬಹುದು ಎಂದು ನಮೋ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು ಔರಂಗಜೇಬನ ಅಖಂಡ ಭಾರತ ಹಾಗೂ ಟಿಪ್ಪು ಸುಲ್ತಾನ್ ಖಡ್ಗ ಹಿಡಿದು ಸಂಭ್ರಮಿಸುವವರನ್ನು ಸರ್ಕಾರ ಓಲೈಸುವುದು ಅತ್ಯಂತ ನೀಚ ಕೃತ್ಯ. ಗೋಡ್ಸೆ ಗಾಂಧಿ ಕೊಂದ ವಿಚಾರ ಬಿಟ್ಟರೆ ಎಲ್ಲಾ ವಿಚಾರಗಳನ್ನು ಸಂಭ್ರಮಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಯುಜಿಆಯುಷ್-2023: ಕೊನೆ ಸುತ್ತಿನ ಸೀಟು ಹಂಚಿಕೆ ಅ.13ಕ್ಕೆ ದಾಖಲೆ ಪರಿಶೀಲನೆ
Advertisement
Advertisement
ಪ್ಯಾಲೆಸ್ಟೈನ್ ಮಾಡಿದ ಹೇಯ ಕೃತ್ಯ ಜಗತ್ತಿಗೆ ತಿಳಿದಿದೆ. ಇದು ಮನುಷ್ಯರು ಮಾಡುವ ಕೃತ್ಯ ಅಲ್ಲ, ರಾಕ್ಷಸರು ಮಾಡುವ ಕೃತ್ಯವಾಗಿದೆ. ಇದಕ್ಕೆ ಕಾಂಗ್ರೆಸ್ (Congress) ಬೆಂಬಲ ನೀಡುತ್ತಿದೆ. ಇದು ಭಾರತದ ಇತಿಹಾಸದ ಪಾಲಿಗೆ ಕಪ್ಪು ಚುಕ್ಕಿಯಾಗಿದೆ. ಗಲಭೆಕೋರರು ಕಾಂಗ್ರೆಸ್ ಬ್ರದರ್ಸ್ ಎನ್ನುವುದು ಅವರ ನೀತಿ. ಅದು ಮಹಿಷ ಆಗಿರಲಿ ಇಲ್ಲವೇ ಹಮಾಸ್ ಉಗ್ರರಾಗಿರಲಿ ಅವರ ಪರ ನಿಲ್ಲುತ್ತದೆ. ಕಾಂಗ್ರೆಸ್‍ಗೆ ಅವಕಾಶ ಸಿಕ್ಕರೆ ಹಮಾಸ್ ಪರವಾಗಿ ಜಯಂತಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಪುನೀತ್ ಕೆರಹಳ್ಳಿ ಮೇಲೆ ಆತ್ಮಹತ್ಯೆ ಯತ್ನ ಕೇಸ್ ದಾಖಲು ವಿಚಾರವಾಗಿ, ಯಾವ ಕಾಂಗ್ರೆಸ್ ಗಾಂಧಿ ಪರಿವಾರದಿಂದ ಆಡಳಿತ ನಡೆಸುತ್ತಿದೆಯೋ ಅದೇ ಕಾಂಗ್ರೆಸ್ ಇಂದು ಕೇಸ್ ಹಾಕಿದೆ. ಬ್ರಿಟಿಷರ ವಿರುದ್ಧ ಎಷ್ಟು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ ಅಷ್ಟು ಬಾರಿ ಕೇಸ್ ಹಾಕಬೇಕಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ರಾಜ್ಯದ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ: ಬಿ.ಸಿ.ಪಾಟೀಲ್
Web Stories