ಮುಂಬೈ: ಮಹಾತ್ಮ ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಒಂದು ಬಾರಿ ಹತ್ಯೆ ಮಾಡಿದರೆ, ಆಧುನಿಕ ಗೋಡ್ಸೆಗಳು ನಿತ್ಯವೂ ಗಾಂಧೀಜಿ ಅವರನ್ನು ಹತ್ಯೆಗೈಯುತ್ತಿದ್ದಾರೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗಾಂಧೀಜಿ ಹೆಸರಿನಲ್ಲಿ ದೇಶವನ್ನೇ ಮರಳು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ತಮ್ಮ ನಾಯಕನೆಂದು ಪರಿಗಣಿಸುತ್ತಾರೆ. ಅವರು ಗಾಂಧೀಜಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ನಾಥೂರಾಮ್ ಗೋಡ್ಸೆಯ ಆಲೋಚನೆಗಳೇ ತುಂಬಿವೆ ಎಂದು ದೂರಿದರು. ಇದನ್ನೂ ಓದಿ: ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ
Advertisement
AIMIM's Asaduddin Owaisi at a rally in Auranagabad yesterday: Godse ne toh Gandhi ko goli mari thi magar maujuda Godse Gandhi ke Hindustan ko khatam kar rahe hain. Jo Gandhi ke maan ne wale hain main unse keh raha hun ki iss watan-e-azeez ko bacha lo. #Maharashtra pic.twitter.com/fNAxynom4E
— ANI (@ANI) October 3, 2019
Advertisement
ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾರತದಲ್ಲೆಡೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಸಂವಿಧಾನವಿದೆ ಎನ್ನುವುದನ್ನೇ ಅವರು ಮರೆತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚುನಾವಣೆಗೂ ಮುನ್ನ ‘ಮಹಾ’ ಸಿಎಂಗೆ ಭಾರೀ ಹಿನ್ನಡೆ – ತನಿಖೆಗೆ ಸುಪ್ರೀಂ ಸಮ್ಮತಿ
Advertisement
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. 288 ಕ್ಷೇತ್ರಗಳಲ್ಲಿ ಮತದಾನವು ಏಕಕಾಲದಲ್ಲಿಯೇ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಎಐಎಂಐಎಂ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.